ADVERTISEMENT

ಲಾಸ್‌ ಏಂಜಲಿಸ್‌: ಆಸ್ಕರ್‌ ಪ್ರಶಸ್ತಿ ಸಮಾರಂಭ ಮುಂದೂಡಿಕೆ

ಪಿಟಿಐ
Published 28 ಮೇ 2021, 7:48 IST
Last Updated 28 ಮೇ 2021, 7:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಲಾಸ್‌ ಏಂಜಲಿಸ್‌: 2022ರ ಆವೃತ್ತಿಯ ಆಸ್ಕರ್‌ ಪ್ರಶಸ್ತಿ ಸಮಾರಂಭವನ್ನು ಮುಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಈ ಮೊದಲು 2022ರ ಫೆಬ್ರುವರಿ 27ರಂದು ಆಯೋಜಿಸಲು ನಿರ್ಧರಿಸಲಾಗಿತ್ತು. ಈ ದಿನಾಂಕವನ್ನು ಬದಲಾಯಿಸಲಾಗಿದ್ದು, 2022ರ ಮಾರ್ಚ್‌ 27ರಂದು ಪ್ರಶಸ್ತಿ ಸಮಾರಂಭ ಆಯೋಜಿಸಲಾಗುವುದು ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್‌ (ಎಎಂಪಿಎಎಸ್) ತಿಳಿಸಿದೆ.

ಆದರೆ, ಅಕಾಡೆಮಿಯ ಪ್ರಶಸ್ತಿಗೆ ಅರ್ಹ ಚಲನಚಿತ್ರಗಳನ್ನು ಪರಿಗಣಿಸುವ ದಿನಾಂಕವನ್ನು ಬದಲಾಯಿಸಿಲ್ಲ. ಡಿಸೆಂಬರ್‌ 31 ಕೊನೆಯ ದಿನವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.