ADVERTISEMENT

ಫ್ರೆಂಡ್‌ಷಿಪ್‌ ಡೇಗೆ ‘ಪದವಿಪೂರ್ವ’ದ ಹಾಡು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 10:56 IST
Last Updated 7 ಆಗಸ್ಟ್ 2022, 10:56 IST
‘ಪದವಿಪೂರ್ವ’ ಚಿತ್ರತಂಡದೊಂದಿಗೆ ಯೋಗರಾಜ್‌ ಭಟ್‌
‘ಪದವಿಪೂರ್ವ’ ಚಿತ್ರತಂಡದೊಂದಿಗೆ ಯೋಗರಾಜ್‌ ಭಟ್‌   

ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲಂಸ್‌ ಜಂಟಿಯಾಗಿ ನಿರ್ಮಿಸುತ್ತಿರುವ, ಹರಿಪ್ರಸಾದ್ ಜಯಣ್ಣ ನಿರ್ದೇಶನದ 'ಪದವಿಪೂರ್ವ' ಚಿತ್ರಕ್ಕಾಗಿ ಯೋಗರಾಜ್ ಭಟ್ ‘ಫ್ರೆಂಡ್ಸ್ ಇದ್ರೇನೆ ಜೀವನ’ ಎಂಬ ಹಾಡು ಬರೆದಿದ್ದಾರೆ.

ಫ್ರೆಂಡ್ ಶಿಪ್ ಡೇ ಗೆ ‘ಪದವಿಪೂರ್ವ’ ಚಿತ್ರತಂಡ ನೀಡಿರುವ ಉಡುಗೊರೆಯಿದು ಎಂದಿದೆ ಚಿತ್ರತಂಡ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ.

‘ತಂದೆ-ತಾಯಿ ಬಳಿ ಹೇಳಿಕೊಳ್ಳಲಾಗದ ಅನೇಕ ವಿಷಯಗಳನ್ನು ಸ್ನೇಹಿತರ ಬಳಿ ಹೇಳಿಕೊಳ್ಳುತ್ತೇವೆ. ಹಾಗಾಗಿ ನನ್ನ ಪ್ರಕಾರ ಸ್ನೇಹ ಸಂಬಂಧ ಎನ್ನುವುದು ಬಹಳ ದೊಡ್ಡದು. ನನ್ನ ಎಲ್ಲಾ ಸ್ನೇಹಿತರಿಗೆ ಈ ಹಾಡನ್ನು ಅರ್ಪಿಸುತ್ತೇನೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಧ್ವನಿಯಲ್ಲಿ ಕೇಳುವುದೆ ಖುಷಿ. ನಿರ್ದೇಶಕ ಹರಿಪ್ರಸಾದ್ ಸೇರಿದಂತೆ ನನ್ನ ಸಹೃದಯಿ ಸ್ನೇಹಿತರ ತಂಡ ಈ ಚಿತ್ರದಲ್ಲಿ ಭಾಗಿಯಾಗಿದೆ. ಎಲ್ಲರಿಗೂ ಶುಭವಾಗಲಿ’ ಎಂದು ಯೋಗರಾಜ್ ಭಟ್ ಹಾರೈಸಿದರು.

ADVERTISEMENT

‘‘ಪದವಿ ಪೂರ್ವ’ 1995-96 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಸೋಷಿಯಲ್ ಮೀಡಿಯಾ ಬರುವುದಕ್ಕೆ ಮುಂಚಿನ ಸ್ನೇಹವನ್ನು ನಮ್ಮ ಚಿತ್ರದಲ್ಲಿ ನೋಡಬಹುದು. ಚಿತ್ರೀಕರಣ ಬಹುತೇಕ ಮುಗಿದಿದೆ. ಅಕ್ಟೋಬರ್ ನಲ್ಲಿ ತೆರೆಗೆ ಬರಲಿದೆ’ ಎಂದರು ನಿರ್ದೇಶಕ ಹರಿಪ್ರಸಾದ್.

‘ನಾವು ಮಕ್ಕಳಿಗೆ ಇಂತಹದ್ದೇ ಮಾಡು ಎನ್ನುವುದಕ್ಕಿಂತ ಅವರಿಗೆ ಇಷ್ಟವಿರುವ ಕಡೆ ಮುಂದುವರಿಯಲು ಬಿಡಬೇಕು. ನನ್ನ ಮಗ ನಾಯಕನಾಗುತ್ತೇನೆ ಅಂದ. ನಾನು ಸರಿ ಎಂದೆ. ನಾನೇ ನಿರ್ಮಾಪಕನೂ ಆದೆ’ ಎಂದರು ನಿರ್ಮಾಪಕ ರವಿ ಶಾಮನೂರು.
‘ನಾಯಕನಾಗಬೇಕೆಂಬ ಕನಸು ಹೊತ್ತು ಬಂದವನು ನಾನು. ಮೊದಲ ಚಿತ್ರದಲ್ಲೇ ಇಂತಹ ಉತ್ತಮ ತಂಡ ಸಿಕ್ಕಿರುವುದು ನನ್ನ ಪುಣ್ಯ. ‘ಪದವಿ ಪೂರ್ವ’ ದಲ್ಲಿ ಪಿ.ಯು.ಸಿ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ’ ಎಂದರು ನಾಯಕ ಪೃಥ್ವಿ ಶಾಮನೂರು.

ಅಂಜಲಿ ಅನೀಶ್ ಹಾಗೂ ಯಶ ಶಿವಕುಮಾರ್ ಈ ಚಿತ್ರದ ನಾಯಕಿಯರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.