ADVERTISEMENT

ಟೀಸರ್‌ನಲ್ಲಿ ‘ಪದವಿಪೂರ್ವ’ ತರಗತಿ

ಚಿತ್ರದ ಟೀಸರನ್ನು ಇತ್ತೀಚೆಗೆ ನವರಸ ನಾಯಕ ಜಗ್ಗೇಶ್‌ ಬಿಡುಗಡೆಗೊಳಿಸಿದರು.

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 11:04 IST
Last Updated 8 ಡಿಸೆಂಬರ್ 2022, 11:04 IST
ಯಶಾ ಶಿವಕುಮಾರ್‌, ಪ್ರಥ್ವಿ ಶಾಮನೂರು, ಅಂಜಲಿ ಅನೀಶ್‌ 
ಯಶಾ ಶಿವಕುಮಾರ್‌, ಪ್ರಥ್ವಿ ಶಾಮನೂರು, ಅಂಜಲಿ ಅನೀಶ್‌    

ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿರುವ ‘ಪದವಿಪೂರ್ವ’ ಚಿತ್ರದ ಟೀಸರನ್ನು ಇತ್ತೀಚೆಗೆ ನವರಸ ನಾಯಕ ಜಗ್ಗೇಶ್‌ ಬಿಡುಗಡೆಗೊಳಿಸಿದರು.

‘ಹದಿನಾರರಿಂದ ಹದಿನೆಂಟು ವಯಸ್ಸಿನವರ ಕುರಿತಾದ ಸಿನಿಮಾಗಳು ಬರುವುದು ಬಹಳ ಕಡಿಮೆ. ಈ ಚಿತ್ರ ಆ ವಯಸ್ಸಿನವರಿಗೆ ಸಂಬಂಧಿಸಿದೆ. ನಾಯಕ ಪೃಥ್ವಿ ಶಾಮನೂರು ಬಹಳ ಲವಲವಿಕೆಯಿಂದ ನಟಿಸಿದ್ದಾನೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಜಗ್ಗೇಶ್ ಹಾರೈಸಿದರು.

ನಾಯಕಿ ಅಂಜಲಿ ಅನೀಶ್ ಇದ್ದಾರೆ, ಯಶಾ ಶಿವಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.

ADVERTISEMENT

ಯೋಗರಾಜ್‌ ಭಟ್‌, ರವಿ ಶಾಮನೂರು ಈ ಚಿತ್ರದ ನಿರ್ಮಾಪಕರು.

ಕಥೆಯಲ್ಲೇನಿದೆ? ಇದು ಮೊಬೈಲ್‌ ಬರುವುದಕ್ಕೂ ಪೂರ್ವದಲ್ಲಿ ಅಂದರೆ 96-97ನೇ ಇಸವಿಯಲ್ಲಿ ನಡೆಯುವ ಕಥೆ. ಆಗ ಮೈದಾನಗಳು ಜಾಸ್ತಿ. ಆಟಗಾರರು ಕಡಿಮೆ. ಈಗ ಆಟಗಾರರು ಜಾಸ್ತಿ. ಮೈದಾನಗಳು ಕಡಿಮೆ. ಆ ಕಾಲಘಟ್ಟದಲ್ಲಿ ನಾನು ಕಂಡ ಕೆಲವು ಘಟನೆಗಳನ್ನಾಧರಿಸಿ ‘ಪದವಿಪೂರ್ವ’ ಚಿತ್ರ ಮಾಡಿದ್ದೇನೆ. ಡಿಸೆಂಬರ್ 30ರಂದು ತೆರೆಗೆ ಬರಲಿದೆ ಎಂದರು ನಿರ್ದೇಶಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.