ADVERTISEMENT

25ರಂದು ಪವನ್ ಕಲ್ಯಾಣ್, ರಾಣಾ ದಗ್ಗುಭಾಟಿ ಅಭಿನಯದ ‘ಭಿಮ್ಲಾ ನಾಯಕ್' ತೆರೆಗೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 7:09 IST
Last Updated 17 ಫೆಬ್ರುವರಿ 2022, 7:09 IST
ಪೋಸ್ಟರ್‌
ಪೋಸ್ಟರ್‌   

ಹೈದರಾಬಾದ್: ನಟ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ‘ಭಿಮ್ಲಾ ನಾಯಕ್' ಸಿನಿಮಾ ಫೆಬ್ರುವರಿ 25ಕ್ಕೆ ತೆರೆಗೆ ಬರಲಿದೆ ಎಂದು ಚಿತ್ರತಂಡ ಖಚಿತಪಡಿಸಿದೆ.

ಈ ಮೊದಲು ಸಿನಿಮಾವನ್ನು ಏಪ್ರಿಲ್‌ ತಿಂಗಳ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಹೇಳಿಕೆ ನೀಡಿತ್ತು. ಇದೀಗ ಹಠಾತ್ತನೆ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಲಾಗಿದೆ.

ಟಾಲಿವುಡ್‌ನಲ್ಲಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಸ್ಟಾರ್‌ ನಟರ ಸಿನಿಮಾಗಳು ತೆರೆಗೆ ಬರುವುದರಿಂದ ’ಭಿಮ್ಲಾ ನಾಯಕ್‌’ ಸಿನಿಮಾ ಬಿಡುಗಡೆಯನ್ನುಇದೇ 25ಕ್ಕೆ ನಿಗದಿ ಮಾಡಲಾಗಿದೆ. ಈಗಾಗಲೇ ಸಿನಿಮಾದ ಬಿಡುಗಡೆಯ ಸಿದ್ಧತೆ ಕೆಲಸಗಳು ನಡೆಯುತ್ತಿವೆ ಎಂದು ನಿರ್ಮಾಪಕರು ಹೇಳಿದ್ದಾರೆ.

ADVERTISEMENT

ಮಲೆಯಾಳಂನ ಸೂಪರ್ ಹಿಟ್ ‘ಅಯ್ಯಪ್ಪನ್ ಕೋಶಿಯಂ‘ ಸಿನಿಮಾದ ರಿಮೇಕ್ ಆಗಿರುವ 'ಭಿಮ್ಲಾ ನಾಯಕ್‌' ಸಿನಿಮಾವನ್ನು ಸಾಗರ್ ಕೆ ಚಂದ್ರಾ ಅವರು ನಿರ್ದೇಶಿಸಿದ್ದಾರೆ.

ಪವನ್ ಕಲ್ಯಾಣ್, ರಾಣಾ ದಗ್ಗುಭಾಟಿ, ನಿತ್ಯಾ ಮೆನನ್, ಸಂಯುಕ್ತಾ ಮೆನನ್ ಪ್ರಮುಖ ತಾರಾಗಣದಲ್ಲಿದ್ದಾರೆ. ಸಿತಾರಾ ಎಂಟರಟೈನ್‌ಮೆಂಟ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.