ADVERTISEMENT

ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ 'ಪ್ರಾರಂಭ' ಶೂಟಿಂಗ್‌ ಪೂರ್ಣ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 14:30 IST
Last Updated 31 ಅಕ್ಟೋಬರ್ 2019, 14:30 IST
‘ಪ್ರಾರಂಭ’ ಚಿತ್ರದಲ್ಲಿ ಕೀರ್ತಿ ಮತ್ತು ಮನೋರಂಜನ್
‘ಪ್ರಾರಂಭ’ ಚಿತ್ರದಲ್ಲಿ ಕೀರ್ತಿ ಮತ್ತು ಮನೋರಂಜನ್   

ನಟ ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಾಯಕನಾಗಿರುವ ‘ಪ್ರಾರಂಭ’ ಸಿನಿಮಾ ಕುತೂಹಲ ಹೆಚ್ಚಿಸಿದೆ. ಸಮಾಜದಿಂದ ಪ್ರತ್ಯೇಕವಾಗಿರುವ ಯುವಕ, ಯುವತಿಯರಿಗೆ ಒಂದೊಳ್ಳೆ ಸಂದೇಶ ಸಾರುವ ಸಿನಿಮಾ ಇದು. ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ ಮತ್ತು ಮೈಸೂರಿನ ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮನೋರಂಜನ್‌ ಹಾಗೂ ನಾಯಕಿ ಕೀರ್ತಿ ಕಲಕೇರಿ ನಟಿಸಿದ ಹಾಡಿನ ಶೂಟಿಂಗ್‌ ಇತ್ತೀಚೆಗೆ ನಡೆಯಿತು. ಈ ಹಾಡಿಗೆ ಕಿಶೋರ್‌ ನೃತ್ಯ ಸಂಯೋಜಿಸಿದ್ದಾರೆ.

ಮನು ಕಲ್ಯಾಡಿ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಜಗದೀಶ್ ಕಲ್ಯಾಡಿ ಆರ್ಥಿಕ ಇಂಧನ ಒದಗಿಸುತ್ತಿದ್ದಾರೆ. ಮನೋರಂಜನ್‌ ಮೂರು ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ತೊಡಗಿಸಿಕೊಂಡಿದೆ. ಶೀಘ್ರವೇ, ಟ್ರೇಲರ್ ಹಾಗೂ ಆಡಿಯೊ ಬಿಡುಗಡೆಗೆ ನಿರ್ಧರಿಸಿದೆ.

ADVERTISEMENT

ಪ್ರಜ್ವಲ್ ಪೈ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್‍ಬಾಬು ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.