ADVERTISEMENT

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಪ್ರಣೀತಾ ಸುಭಾಷ್

ಪಿಟಿಐ
Published 10 ಜೂನ್ 2022, 16:31 IST
Last Updated 10 ಜೂನ್ 2022, 16:31 IST
ಪ್ರಣೀತಾ ಸುಭಾಷ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಚಿತ್ರ
ಪ್ರಣೀತಾ ಸುಭಾಷ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಚಿತ್ರ   

ಬೆಂಗಳೂರು: ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಖುಷಿ ವಿಚಾರವನ್ನು ಹಂಚಿಕೊಂಡಿರುವ ಅವರು, ಮಗಳು ಬಂದಾಗಿನಿಂದ ನನ್ನ ಜೀವನ ಅವಾಸ್ತವಿಕವಾಗಿದೆ ಎಂದು ಬರೆದುಕೊಂಡಿದ್ದಾರೆ.

ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಪ್ರಣೀತಾ, ಕಳೆದ ವರ್ಷ ಮೇನಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ADVERTISEMENT

ಇತ್ತೀಚೆಗೆ ಅವರ ಬೇಬಿ ಬಂಪ್ ಚಿತ್ರಗಳು ವೈರಲ್ ಆಗಿದ್ದವು.

'ಸ್ತ್ರೀರೋಗ ತಜ್ಞೆ ತಾಯಿಯನ್ನು ಹೊಂದಿರುವುದು ನಿಜಕ್ಕೂ ನನ್ನ ಅದೃಷ್ಟ. ಆದರೆ, ಅವರಿಗೆ ಭಾವನಾತ್ಮಕವಾಗಿ ಇದು ಕಠಿಣ ಸಮಯ’ ಎಂದು ಅವರು ಹೇಳಿದ್ದಾರೆ. ಕಡಿಮೆ ನೋವಿನಲ್ಲಿ ಹೆರಿಗೆ ಮಾಡಿಸಿದ ವೈದ್ಯಕೀಯ ತಂಡಕ್ಕೆ ಧನ್ಯವಾದ ಎಂದು ಪ್ರಣೀತಾ ಹೇಳಿದ್ದಾರೆ.

ಪ್ರಿಯದರ್ಶನ್ ನಿರ್ದೇಶನದ ಹಿಂದಿಯ ‘ಹಂಗಾಮಾ–2’ ಅವರು ಅಭಿನಯಿಸಿದ ಕೊನೆಯ ಚಿತ್ರವಾಗಿದೆ.

ಪೊರ್ಕಿ, ಬಾವ, ಭೀಮಾ ತೀರದಲ್ಲಿ ಅವರು ಅಭಿನಯಿಸಿರುವ ಕೆಲ ಕನ್ನಡ ಚಿತ್ರಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.