ADVERTISEMENT

ಪ್ರೇಕ್ಷಕರ ಮನಗೆದ್ದ ʼಪ್ರೇಮಕ್ಕೆ ಕಣ್ಣಿಲ್ಲʼ ವಿಡಿಯೊ ಸಾಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2021, 11:45 IST
Last Updated 10 ಅಕ್ಟೋಬರ್ 2021, 11:45 IST
   

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ಮುಂದಿನ ವರ್ಷ ತೆರೆಗೆ ಬರಲು ಸಜ್ಜಾಗಿರುವ 'ಸಖತ್' ಸಿನಿಮಾದ ವಿಡಿಯೊ ಹಾಡೊಂದು ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.

'ಪ್ರೇಮಕ್ಕೆ ಕಣ್ಣಿಲ್ಲ' ವಿಡಿಯೊದಲ್ಲಿ ಗಣೇಶ್ ಹಾಗೂ ನಟಿ ನಿಶ್ವಿಕಾ ನಾಯ್ಡು ಅವರ ಪ್ರಣಯ ಭರಿತ ಗೀತೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಜಯಂತ್ ಕಾಯ್ಕಿಣಿ ಅವರು ಈ ಗೀತೆ ರಚಿಸಿದ್ದಾರೆ.ಜುಧಾ ಸಂಧ್ಯಾ ಅವರ ಸಂಗೀತದಲ್ಲಿ ಮೂಡಿಬಂದಿರುವ ಈ ಗೀತೆಗೆ ಪಂಚಮ್ ಜೀವಾ ಹಾಗೂ ಶ್ರೇಯಾ ಅಯ್ಯರ್ ಅವರು ದನಿ ನೀಡಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಖತ್ ಸಿನಿಮಾ ಗಣೇಶ್ ಅವರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಸದ್ಯ ಇದು ನಿರ್ಮಾಣ ಹಂತದಲ್ಲಿದ್ದು, ಕೆವಿಎನ್ ಪ್ರೊಡಕ್ಸನ್ ಅಡಿ ನಿರ್ಮಾಣವಾಗುತ್ತಿದೆ.

ADVERTISEMENT

ಪ್ರೇಮಕ್ಕೆ ಕಣ್ಣಿಲ್ಲ ವಿಡಿಯೊ ಗೀತೆ ಬಿಡುಗಡೆಯಾದ ಒಂದೇ ದಿನದಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.