ADVERTISEMENT

ಶಶಿಕಲೆಯಾಗಿ ‘ತಲೈವಿ’ ಚಿತ್ರತಂಡ ಸೇರಿದ ಪ್ರಿಯಾಮಣಿ

Priyamani in Talaivi Movie

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:15 IST
Last Updated 8 ಡಿಸೆಂಬರ್ 2019, 20:15 IST
ಪ್ರಿಯಾಮಣಿ, ನಟಿ
ಪ್ರಿಯಾಮಣಿ, ನಟಿ   

ಜಯಲಲಿತಾ ಜೀವನಾಧಾರಿತ ಚಿತ್ರದಲ್ಲಿ ಕಂಗನಾ, ಜಯಲಲಿತಾ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ತಮಿಳು ಭಾಷೆಯನ್ನು ಅವರು ಈಚೆಗೆ ಕಲಿಯುತ್ತಿರುವುದು ಸುದ್ದಿಯಾಗಿತ್ತು. ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಗೊಳ್ಳಲಿರುವ ‌ಈ ’ತಲೈವಿ‘ ಸಿನಿಮಾದ ಬಗ್ಗೆ ಭಾರಿ ಕುತೂಹಲ ಅಭಿಮಾನಿಗಳದ್ದು.

ಜಯಲಲಿತಾ ಅವರ ಆಪ್ತ ಸ್ನೇಹಿತೆ ಶಶಿಕಲಾ ಅವರಿಲ್ಲದೇ ಈ ಸಿನಿಮಾ ಅಪೂರ್ಣ. ಆ ವಿವಾದಾತ್ಮಕ ಶಶಿಕಲಾ ಪಾತ್ರಕ್ಕೆ ನಟಿ ಪ್ರಿಯಾಮಣಿ ಜೀವ ತುಂಬಲಿದ್ದಾರೆ. ಎಂಜಿ ರಾಮಚಂದ್ರನ್‌ ಪಾತ್ರಕ್ಕೆ ತಮಿಳು ನಟ ಅರವಿಂದ ಸ್ವಾಮಿ ಅವರನ್ನ ಆಯ್ಕೆ ಮಾಡಲಾಗಿದೆ. ಈ ಸಿನಿಮಾವನ್ನು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು, ಫೆಬ್ರವರಿ 20, 2020ರಲ್ಲಿ ತೆರೆಮೇಲೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT