ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ 2026ರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ಅವರ ಪತಿ ನಿಕ್ ಜೋನಾಸ್ ಅವರು ರೆಡ್ ಕಾರ್ಪೆಟ್ ಮೇಲೆ ವಿಭಿನ್ನವಾಗಿ ಕಾಣಿಸಿಕೊಂಡರು.
ಚಿತ್ರ ಕೃಪೆ: @IIFA
ಪ್ರಿಯಾಂಕಾ ಚೋಪ್ರಾ ಅವರ ಪತಿ ಜೋನಾಸ್ ಜತೆ ರೆಡ್ ಕಾರ್ಪೆಟ್ ಮೇಲೆ ಸ್ಟೈಲಿಶ್ ಆಗಿ ವಾಕಿಂಗ್ ಮಾಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ, ಪ್ರಿಯಾಂಕಾ ಸ್ಟ್ರಾಪ್‌ಲೆಸ್ ನೇವಿ-ಬ್ಲೂ ಬಣ್ಣದ ಗೌನ್ ಹಾಕಿದ್ದರು. ಜೊತೆಗೆ ವಜ್ರದ ನೆಕ್ಲೇಸ್, ಉಂಗುರ ಮತ್ತು ಕಿವಿಯೋಲೆಗಳನ್ನು ಧರಿಸಿದ್ದರು.
2026ರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಲಾಸ್ ಏಂಜಲೀಸ್‌ನ ಬೆವರ್ಲಿ ಹಿಲ್ಟನ್‌ನಲ್ಲಿ ನಡೆಯುತ್ತಿದೆ.
ಪತಿ ನಿಕ್‌ರ ಕಪ್ಪು ಬಣ್ಣದ ಸೂಟ್‌ಗೆ ಒಪ್ಪುವಂತಹ ನೇವಿ ಬ್ಲೂ ಬಣ್ಣದ ಗೌನ್ ಧರಿಸಿದ್ದ ಪ್ರಿಯಾಂಕಾ, ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡಿದ್ದು ಹೀಗೆ
ಪ್ರಶಸ್ತಿ ಪ್ರದಾನದ ವೇಳೆ ಪ್ರಿಯಾಂಕಾ ಅವರು ದಕ್ಷಿಣ ಕೊರಿಯಾದ ಗರ್ಲ್ ಬ್ಯಾಂಡ್ ಬ್ಲ್ಯಾಕ್‌ಪಿಂಕ್‌ನ ಲಿಸಾ ಎಂದು ಜನಪ್ರಿಯವಾಗಿರುವ ಪಾಪ್ ತಾರೆ ಲಾಲಿಸಾ ಮನೋಬಲ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.
ಬಾಲಿವುಡ್‌ನಿಂದ ದೂರವುಳಿದಿದ್ದ ಪ್ರಿಯಾಂಕಾ ಈಗ, ನಿರ್ಮಾಪಕ ಎಸ್. ಎಸ್. ರಾಜಮೌಳಿ ಅವರ ಮುಂದಿನ ‘ವಾರಾಣಸಿ’ ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.