ADVERTISEMENT

ಅಪ್ಪನ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ಪುನೀತ್ ಮಗಳು ಧೃತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 13:19 IST
Last Updated 30 ಅಕ್ಟೋಬರ್ 2021, 13:19 IST
   

ಬೆಂಗಳೂರು: ಪುನೀತ್ ಪಾರ್ಥಿವ ಶರೀರ ಕಂಡು ಅವರ ಹಿರಿಯ ಪುತ್ರಿ ಧೃತಿ ಕಣ್ಣೀರಿಟ್ಟರು.

ಅಪ್ಪನ ತಲೆಯ ಮೇಲೆ ಕೈ ನೇವರಿಸಿದ ಅವರು ಬಿಕ್ಕಿ ಬಿಕ್ಕಿ ಅತ್ತರು ಈ ದೃಶ್ಯ ನೋಡುಗರ ಮನ ಕಲಕುವಂತಿತ್ತು.

ಪುನೀತ್ ಪತ್ನಿ ಅಶ್ವಿನಿ ಹಾಗೂ ಕಿರಿಯ ಪುತ್ರಿ ಕೂಡ ಗದ್ಗದಿತರಾದರು.

ADVERTISEMENT

ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅವರು, ಇಂದು ಮಧ್ಯಾಹ್ನ ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸಿದ್ದರು.ಅಲ್ಲಿಂದ ಸಂಜೆ ಬೆಂಗಳೂರಿಗೆ ಬಂದರು.

ಕಂಠೀರವ ಸ್ಟುಡಿಯೊದಲ್ಲಿ ನಾಳೆ ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.