ADVERTISEMENT

ಚಂದನವನದಲ್ಲಿ ಪುನೀತ್‌ ರಾಜ್‌ಕುಮಾರ್‌ಗೆ 45 ವರ್ಷ: ʼಅಪ್ಪುʼಗೆ ಶುಭಾಶಯಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 8:32 IST
Last Updated 28 ಫೆಬ್ರುವರಿ 2021, 8:32 IST
ಪುನೀತ್‌ ರಾಜ್‌ಕುಮಾರ್‌ ಅವರಿಗೆ ಶುಭಕೋರಿದ ಪೋಸ್ಟರ್‌ (ಟ್ವಿಟರ್‌ ಚಿತ್ರ)
ಪುನೀತ್‌ ರಾಜ್‌ಕುಮಾರ್‌ ಅವರಿಗೆ ಶುಭಕೋರಿದ ಪೋಸ್ಟರ್‌ (ಟ್ವಿಟರ್‌ ಚಿತ್ರ)   

ನಟ ಪುನೀತ್‌ ರಾಜ್‌ಕುಮಾರ್‌ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 45 ವರ್ಷಗಳು ಪೂರ್ಣಗೊಳ್ಳುತ್ತಿರುವ ಸಂಭ್ರಮವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸೃಜನ್‌ ಲೋಕೇಶ್‌, ಸಾಗರ್‌ ಮತ್ತಿತರ ಹಲವಾರು ಪ್ರಮುಖರು ಪುನೀತ್‌ ರಾಜ್‌ಕುಮಾರ್‌ ಅವರಿಗೆ ಶುಭಕೋರಿದ್ದಾರೆ.

45 ಇಯರ್ಸ್‌ ಆಫ್‌ ಕಿಂಗ್‌ ಅಪ್ಪು ದರ್ಬಾರ್‌ ಎಂಬ ಬರಹವುಳ್ಳ ಪೋಸ್ಟರ್‌ನ್ನು ಹಂಚಿಕೊಳ್ಳುತ್ತಿದ್ದಾರೆ.

1980ರಲ್ಲಿ ಬಾಲನಟನಾಗಿ ಪುನೀತ್‌ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿದ್ದರು. 28 ಚಿತ್ರಗಳಲ್ಲಿ ನಟಿಸಿದ್ದಾರೆ. ಯುವರತ್ನ, ಜೇಮ್ಸ್‌ ಬಿಡುಗಡೆಗೆ ಬಾಕಿ ಇದೆ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ನಿರೂಪಕರಾಗಿಯೂ ಅವರು ಹೆಸರು ಗಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.