ADVERTISEMENT

ಫಸ್ಟ್‌ ಲುಕ್‌: ‘ಪುಷ್ಪ’ದಲ್ಲಿ ಐಪಿಎಸ್‌ ಅಧಿಕಾರಿಯಾದ ಫಹಾದ್ ಫಾಸಿಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2021, 11:27 IST
Last Updated 28 ಆಗಸ್ಟ್ 2021, 11:27 IST
ಫಹಾದ್ ಫಾಸಿಲ್
ಫಹಾದ್ ಫಾಸಿಲ್    

ಪ್ಯಾನ್‌ ಇಂಡಿಯಾ ಸಿನಿಮಾ ‘ಪುಷ್ಪ’ದಲ್ಲಿ ಮಲಯಾಳಂನ ಸೂಪರ್‌ ಸ್ಟಾರ್‌ ಫಹಾದ್ ಫಾಸಿಲ್ ಅವರು ಐಪಿಎಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಫಹಾದ್ ಫಾಸಿಲ್ ಅವರ ಫಸ್ಟ್‌ ಲುಕ್‌ ಅನ್ನು ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ ಶನಿವಾರ ಹಂಚಿಕೊಂಡಿದೆ.

ಭನ್ವರ್‌ ಸಿಂಗ್‌ ಶೇಖಾವತ್‌ (ಐಪಿಎಸ್‌) ಪಾತ್ರದಲ್ಲಿ ಕಾಣಿಸಿಕೊಂಡಿರುವ ಫಹಾದ್ ಫಾಸಿಲ್ ತಮ್ಮ ನೋಟದ ತೀವ್ರತೆಯಿಂದಲೇ ಭಯ ಹುಟ್ಟಿಸಲಿದ್ದಾರೆ ಎಂಬುದು ಫಸ್ಟ್‌ ಲುಕ್‌ನಲ್ಲೇ ಗೊತ್ತಾಗುತ್ತದೆ.

ADVERTISEMENT

ರಕ್ತಚಂದನ ಚೋರರ ಕಥೆಯುಳ್ಳ ತೆಲುಗು ಸಿನಿಮಾ 'ಪುಷ್ಪ' ಭಾರತದ ಬಹು ನಿರೀಕ್ಷಿತ ಚಿತ್ರವಾಗಿದೆ.

ಈ ಚಿತ್ರದಲ್ಲಿ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಡಾಲಿ ಧನಂಜಯ, ಪ್ರಕಾಶ್‌ ರಾಜ್‌, ಜಗಪತಿ ಬಾಬು, ವೆನ್ನೆಲಾ ಕಿಶೋರ್‌ ಮುಂತಾದವರು ಪುಷ್ಪದಲ್ಲಿ ನಟಿಸಿದ್ದಾರೆ.

ಸುಕುಮಾರ್‌ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ 'ಪುಷ್ಪ' ಸಾಕಷ್ಟು ಸದ್ದು ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.