ನಮ್ಮ ಸುತ್ತಮುತ್ತಲಿನ ವಿಚಿತ್ರ ಪಾತ್ರಗಳ ಕುರಿತಾದ ಕಥೆಯನ್ನು ಹೊಂದಿರುವ ‘ರಾಜರತ್ನಾಕರ’ ತೆರೆಗೆ ಬರಲು ಸಿದ್ಧವಾಗಿದೆ. ವೀರೇಶ್ ಬೊಮ್ಮಸಾಗರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚೌಮುದ ಬ್ಯಾನರ್ ಅಡಿ ಜಯರಾಮ ಸಿ. ಮಾಲೂರು ಬಂಡವಾಳ ಹೂಡಿದ್ದಾರೆ.
‘ಬೆಂಗಳೂರಿನ ಮಧ್ಯಮ ವರ್ಗದವರ ಕಥೆಯನ್ನು ಹೊಂದಿದೆ. ದುರಹಂಕಾರಿಯೊಬ್ಬನ ಕಥೆ. ಸೋಮಾರಿತನದಿಂದ ಬಂದಂಥ ದುರಹಂಕಾರ. ಆತ ಮುಂದೆ ಹೇಗೆ ಜೀವನ ಕಟ್ಟಿಕೊಳ್ಳುತ್ತಾನೆ ಎಂಬುದೇ ಚಿತ್ರದ ಕಥೆ. ಆತನ ಸುತ್ತ ಹಲವು ವಿಚಿತ್ರ ಪಾತ್ರಗಳು ಬರುತ್ತವೆ’ ಎಂದರು ನಿರ್ದೇಶಕರು.
ಚಂದನ್ ರಾಜ್‌ಗೆ ಅಪ್ಸರಾ ಜೋಡಿಯಾಗಿದ್ದಾರೆ. ನಾಗರಾಜ್ ರಾವ್, ಯಮುನಾ ಶ್ರೀನಿಧಿ, ಚೇತನ್ ದುರ್ಗಾ, ಸಿದ್ದು, ಡಿಂಗ್ರಿ ನರೇಶ್ ಮುಖ್ಯ ಪಾತ್ರದಲ್ಲಿದ್ದಾರೆ.
ಹರ್ಷವರ್ಧನ್ ರಾಜ್ ಸಂಗೀತ, ಸಿದ್ದು ಕೆಂಚನಹಳ್ಳಿ ಛಾಯಾಚಿತ್ರಗ್ರಹಣ, ಶಾಂತಕುಮಾರ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.