ADVERTISEMENT

ಮರು ಬಿಡುಗಡೆಯಾಗುತ್ತಿದೆ ರಜನಿ ಸೂಪರ್‌ಹಿಟ್ ಸಿನಿಮಾ ‘ಪಡಿಯಪ್ಪ’: ವಿಶೇಷ ಏನಿದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಡಿಸೆಂಬರ್ 2025, 11:25 IST
Last Updated 7 ಡಿಸೆಂಬರ್ 2025, 11:25 IST
<div class="paragraphs"><p>ಪಡಿಯಪ್ಪ</p></div>

ಪಡಿಯಪ್ಪ

   

ಬೆಂಗಳೂರು: ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರ 1999 ರ ಸೂಪರ್‌ಹಿಟ್ ಸಿನಿಮಾ 'ಪಡಿಯಪ್ಪ' ಮರು ಬಿಡುಗಡೆಯಾಗುತ್ತಿದೆ.

ಕೆ.ಎಸ್. ರವಿಕುಮಾರ್ ನಿರ್ದೇಶನದ ಈ ಚಿತ್ರ ರಜನಿಕಾಂತ್ ಜನ್ಮದಿನದ ಪ್ರಯುಕ್ತ ಇದೇ ಡಿಸೆಂಬರ್ 12 ರಂದು 4ಕೆ ಹಾಗೂ ಅತ್ಯಾಧುನಿಕ ಸೌಂಡ್ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಯಾಗುತ್ತಿದೆ.

ADVERTISEMENT

ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಅವರು ಈ ವಿಷಯ ಹಂಚಿಕೊಂಡಿದ್ದಾರೆ.

ವಿಶೇಷವಾಗಿ ರಜನಿಕಾಂತ್ ಅವರು ಇದೇ ಡಿಸೆಂಬರ್ 12ರಂದು 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಅಲ್ಲದೇ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 50 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗ ಹಲವು ಕಾರ್ಯಕ್ರಮಗಳನ್ನು ಯೋಜಿಸಿ ಎನ್ನಲಾಗಿದೆ.

ಇನ್ನು ಪಡಿಯಪ್ಪ ಸಿನಿಮಾ ಬಿಡುಗಡೆಯಾಗಿ 25 ವರ್ಷ ಗತಿಸಿದರೂ ಅದರ ಖ್ಯಾತಿ ಮಾಸಿಲ್ಲ. ಇದಕ್ಕೆ ಜ್ವಲಂತ ಉದಾಹರಣೆ ಈ ಚಿತ್ರದ ಎಷ್ಟೊ ದೃಶ್ಯಗಳು, ಡೈಲಾಗ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್, ಶಾರ್ಟ್, ಟಿಕ್‌ಟಾಕ್ ವಿಡಿಯೊಗಳಿಗೆ ಆಹಾರ.

1995ರ ಏಪ್ರಿಲ್ 10 ರಂದು ಬಿಡುಗಡೆಯಾಗಿದ್ದ ಪಡಿಯಪ್ಪ, ತಮಿಳುನಾಡು ಸೇರಿದಂತೆ ದೇಶದ ಅನೇಕ ಕಡೆ 150ಕ್ಕೂ ಹೆಚ್ಚು ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು.

ಚಿತ್ರದಲ್ಲಿ ರಜನಿಕಾಂತ್ ಜೊತೆಯಾಗಿ ರಮ್ಯ ಕೃಷ್ಣನ್, ಸೌಂದರ್ಯ, ಶಿವಾಜಿ ಗಣೇಶನ್, ನಾಸರ್ ಮುಂತಾದವರು ಅಭಿನಯಿಸಿದ್ದರು. ಎ.ಆರ್. ರೆಹಮಾನ್ ಅವರ ಸಂಗೀತ ಚಿತ್ರಕ್ಕಿತ್ತು. ಅರುಣಾಚಲ ಸಿನಿ ಕ್ರಿಯೇಷನ್ಸ್‌ ನಿರ್ಮಾಣ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.