ADVERTISEMENT

ಕನ್ನಡದಲ್ಲೂ ಬರುತ್ತಿದೆ RGV ಲಡ್ಕಿ ಸಿನಿಮಾ: ಮಾರ್ಷಲ್ ಆರ್ಟ್ಸ್‌ ಮಿಂಚಿನ ಹುಡುಗಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 10:41 IST
Last Updated 11 ಜುಲೈ 2022, 10:41 IST
ಲಡ್ಕಿ ಸಿನಿಮಾ ಪೋಸ್ಟರ್
ಲಡ್ಕಿ ಸಿನಿಮಾ ಪೋಸ್ಟರ್   

ಟಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ಹಲವು ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(ಆರ್‌ಜಿವಿ) ಹಲವು ಕಥಾಹಂದರದ ಸಿನಿಮಾಗಳನ್ನು ಪ್ರೇಕ್ಷಕರೆದುರಿಗಿರಿಸಿದ್ದಾರೆ.

ಇದೀಗ ಆರ್‌ಜಿವಿ, ಸಮರ ಕಲೆಯಾಧಾರಿತ ಪ್ಯಾನ್ ಇಂಡಿಯಾ ಸಿನಿಮಾವೊಂದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, ಆ ಚಿತ್ರ‌ ‘ಹುಡುಗಿ’ ಎಂಬ ಶೀರ್ಷಿಕೆಯಡಿ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಇದೇ 15ಕ್ಕೆ ಚಿತ್ರ ತೆರೆಗೆ ಬರುತ್ತಿದೆ.

ಚಿತ್ರದ ಕುರಿತು ಮಾಹಿತಿ ನೀಡಿದ ವರ್ಮಾ, ‘ಇದು ತುಂಬಾ ವಿಶೇಷವಾದ ಸಿನಿಮಾ. ನಾನು ಚಿಕ್ಕವನಿದ್ದಾಗ ‘ಎಂಟರ್ ದಿ ಡ್ರ್ಯಾಗನ್’ ಸಿನಿಮಾ ನೋಡಿದ್ದೆ. ಆ ಕಥೆಯ ನಾಯಕ‌ ಬ್ರೂಸ್ಲಿಯಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಿದ್ದು, ಮಾರ್ಷಲ್ ಆರ್ಟ್ಸ್‌ಗೆ ಸಂಬಂಧಪಟ್ಟ ಸಿನಿಮಾ ಇದಾಗಿದೆ. ಈ ಕಲೆಯನ್ನು ಅಭ್ಯಾಸ ಮಾಡುವವರ ಸಂಖ್ಯೆ ವಿರಳ. ಅದರಲ್ಲೂ ಹೆಣ್ಣು ಮಕ್ಕಳು ಈ ತರಬೇತಿ ಪಡೆಯುವುದು ಕಡಿಮೆ. ನಾಯಕಿ ಪೂಜಾ ಹನ್ನೆರೆಡು ವರ್ಷದಿಂದ ಸಮರಕಲೆ ಅಭ್ಯಾಸ ಮಾಡುತ್ತಿದ್ದು, ಹೀಗಾಗಿ ಆಕೆಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದೆ. ಪ್ರೇಮಕಥೆಯೂ ಚಿತ್ರದಲ್ಲಿದೆ’ ಎಂದರು.

ADVERTISEMENT

‘ಹುಡುಗಿ’ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದೆ. ಆರ್ಟ್ಸಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತೆರೆಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.