ADVERTISEMENT

ಸರ್ಕಾರಿ ಜಾಗದಲ್ಲಿ ಚಿತ್ರದ ಪೋಸ್ಟರ್ ಅಂಟಿಸಿದ್ದಕ್ಕೆ ರಾಮ್ ಗೋಪಾಲ್ ವರ್ಮಾಗೆ ದಂಡ

ಏಜೆನ್ಸೀಸ್
Published 29 ಜುಲೈ 2020, 7:04 IST
Last Updated 29 ಜುಲೈ 2020, 7:04 IST
ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ   

ಹೈದರಾಬಾದ್‌: ಬಿಡುಗಡೆಗೆ ಸಜ್ಜಾಗಿರುವ ‘ಪವರ್‌ ಸ್ಟಾರ್’‌ ಚಲನಚಿತ್ರದ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಅಂಟಿಸಿದ ಕಾರಣಕ್ಕೆ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರಿಗೆ ಬೃಹತ್‌ ಹೈದರಾಬಾದ್‌ ಮಹಾನಗರ ಪಾಲಿಕೆಯ(ಜಿಎಚ್‌ಎಂಸಿ) ಜಾಗೃತ ದಳ ದಂಡ ವಿಧಿಸಿದೆ.

ಜಿಎಚ್‌ಎಂಸಿ ಕಾಯ್ದೆಯನ್ನುಉಲ್ಲಂಘಿಸಿರುವನಿರ್ದೇಶಕ, ತಮ್ಮ ಸಿನಿಮಾ ಪ್ರಚಾರಕ್ಕಾಗಿ ಸರ್ಕಾರದ ಆಸ್ತಿಯನ್ನು ಬಳಸಿಕೊಂಡಿದ್ದಾರೆ ಎಂದು ಪಾಲಿಕೆ ಹೇಳಿದೆ.

‘ಪೋಸ್ಟರ್‌ ಅಂಟಿಸಿದ ಕಾರಣಕ್ಕಾಗಿ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರಿಗೆ ಜಿಎಚ್‌ಎಂಸಿಯ ಸೆಕ್ಷನ್‌ 402, 421 ಮತ್ತು 1955ರ ಜಿಎಚ್‌ಎಂಸಿಯ ಕಾಯ್ದೆಯ 674, 596, 487ರ ಅಡಿಯಲ್ಲಿಜಿಎಚ್‌ಎಂಸಿ ಜಾಗೃತ ದಳ ಹಾಗೂ ವಿಪತ್ತು ನಿರ್ವಹಣೆ ನಿರ್ದೇಶಕರು ₹ 4000 ದಂಡ ವಿಧಿಸಿದ್ದಾರೆ’ ಎಂದು ಪ್ರಕಟಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.