ADVERTISEMENT

ಇಸ್ಮಾರ್ಟ್‌ನಲ್ಲಿ ಇಬ್ಬರು ‘ರೆಡ್‌’ನಲ್ಲಿ ಮೂವರೇ?

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 19:45 IST
Last Updated 31 ಜನವರಿ 2020, 19:45 IST
ರೆಡ್ ಚಿತ್ರ
ರೆಡ್ ಚಿತ್ರ   

ಇಸ್ಮಾರ್ಟ್‌ ಶಂಕರ್ ಚಿತ್ರದ ಜಯದ ಅಲೆಯಲ್ಲಿ ತೇಲುತ್ತಿರುವ ಟಾಲಿವುಡ್‌ನ ಎನರ್ಜೆಟಿಕ್ ಸ್ಟಾರ್‌ ರಾಮ್ ಪೋತಿನೇನಿ, ಪ್ರಸ್ತುತ ಕಿಶೋರ್ ತಿರುಮಲ ನಿರ್ದೇಶನದ ‘ರೆಡ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರ ಜೋಡಿ, ಈ ಹಿಂದೆ ‘ನೇನು ಶೈಲಜಾ’ ಹಾಗೂ ‘ಉನ್ನದಿ ಒಕಟೇ ಜಿಂದಗಿ’ಯಂತಹ ಉತ್ತಮ ಚಿತ್ರಗಳ ಮೂಲಕ ಪ್ರೇಕ್ಷಕರರನ್ನು ರಂಜಿಸಿತ್ತು. ಈಗ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ ರಾಮ್ ಹಾಗೂ ಕಿಶೋರ್‌ ಇದ್ದಾರೆ.

ಈಗಾಗಲೇ ರೆಡ್ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿರುವ ಚಿತ್ರತಂಡ, ಇನ್ನೊಂದು ತಿಂಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ಹೇಳಿದೆ. ಈ ನಡುವೆ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ವೇಳೆ, ಕಾಲಿವುಡ್‌ನ ವಿಜಯ್ ನಟನೆಯ ‘ಬಿಗಿಲ್‌’ ಚಿತ್ರದಲ್ಲಿ ನಟಿಸಿದ್ದ ಅಮೃತಾ ಅಯ್ಯರ್‌ ಅವರೂ ಚಿತ್ರದಲ್ಲಿ ಇದ್ದಾರೆ ಎಂಬ ಸುಳುಹು ನೀಡಿದೆ.

ನಿವೇದಾ ಪೇತುರಾಜ್‌ ಹಾಗೂ ಮಾಳವಿಕ ಶರ್ಮ ಅವರು ಈ ಚಿತ್ರದಲ್ಲಿ ನಾಯಕ ನಟಿಯರಾಗಿ ನಟಿಸುತ್ತಿದ್ದಾರೆ ಎಂದು ಚಿತ್ರತಂಡ ಈಗಾಗಲೇ ಪ್ರಕಟಿಸಿದೆ. ಈಗ ಅಮೃತಾ ಅಯ್ಯರ್ ಅವರೂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ ಮೇಲೆ ಮೂವರು ನಾಯಕಿಯರು ಇರುವುದು ಸ್ಪಷ್ಟವಾಗುತ್ತಿದೆ.

ADVERTISEMENT

ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿ ಕನ್ನಡತಿ ನಭಾ ನಟೇಶ್‌ ಹಾಗೂ ಬಾಲಿವುಡ್‌ನ ನಿಧಿ ಅಗರ್‌ವಾಲ್‌ ರಾಮ್‌ ಜೊತೆ ತೆರೆಹಂಚಿಕೊಂಡಿದ್ದರು. ಈಚೆಗೆ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ಮೂವರು ಹೀರೊಯಿನ್‌ಗಳಿರುವುದು ಅಪರೂಪ. ಚಿತ್ರದ ಮೂಲಕ ರಾಮ್ ಹೊಸ ಪರಿಪಾಠ ಆರಂಭಿಸಲಿದ್ದಾರೆಯೇ ಎಂಬ ಮಾತುಗಳೂ ಟಾಲಿವುಡ್‌ನಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.