ADVERTISEMENT

ಪುರಿ ಜಗನ್ನಾಥ್‌ ಚಿತ್ರದಲ್ಲಿ ರಮ್ಯಾಕೃಷ್ಣ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 19:30 IST
Last Updated 3 ನವೆಂಬರ್ 2019, 19:30 IST
   

‘ಬಾಹುಬಲಿ’ ಖ್ಯಾತಿಯ ನಟಿ ರಮ್ಯಾ ಕೃಷ್ಣ, ಪುರಿ ಜಗನ್ನಾಥ ಅವರ ‘ರೊಮ್ಯಾಂಟಿಕ್‌’ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಈ ಹೊಸ ಚಿತ್ರದಲ್ಲಿ ಆಕಾಶ್‌ ಪುರಿ ಹಾಗೂ ಕೇತಿಕಾ ಶರ್ಮಾ ಜೋಡಿಯಾಗಿ ನಟಿಸಲಿದ್ದು, ಅನಿಲ್‌ ಪಡುರಿ ಈ ನಿರ್ದೇಶನ ಮಾಡಲಿದ್ದಾರೆ.

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ‘ರೊಮ್ಯಾಂಟಿಕ್‌’ ಸಿನಿಮಾದ ಚಿತ್ರೀಕರಣದಲ್ಲಿ ರಮ್ಯಾ ಸೇರಿಕೊಂಡಿದ್ದಾರೆ.ಈ ಚಿತ್ರಕ್ಕೆ ಸುನಿಲ್‌ ಕಶ್ಯಪ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ. ನಾಗೇಶ್‌ ಕ್ಯಾಮೆರಾ ಕೆಲಸ ಮಾಡಲಿದ್ದಾರೆ.

ADVERTISEMENT

‘ಇಸ್ಮಾರ್ಟ್‌ ಶಂಕರ್‌’ ಚಿತ್ರದ ಭಾರಿ ಯಶಸ್ಸಿನ ನಂತರ ಪುರಿ ಜಗನ್ನಾಥ್‌ ‘ರೊಮ್ಯಾಂಟಿಕ್‌’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬಂಡವಾಳ ಹೂಡುವುದರ ಜೊತೆಗೆ ಈ ಚಿತ್ರದ ಕತೆ, ಸ್ಕ್ರೀನ್‌ ಪ್ಲೇ, ಸಂಭಾಷಣೆಯೂ ಪುರಿ ಜಗನ್ನಾಥ್‌ ಅವರದು. ಸಂಕಲನವನ್ನು ಜುನೈದ್‌ ಸಿದ್ದಿಕಿ ವಹಿಸಿಕೊಂಡಿದ್ದು, ಪ್ರಮುಖ ಪಾತ್ರಗಳಲ್ಲಿ ಉತ್ತೇಜ್‌, ಮಕರಂದ ದೇಶಪಾಂಡೆ ಹಾಗೂ ಸನೈನಾ ನಟಿಸಲಿದ್ದಾರೆ.

ಇದಲ್ಲದೇ ವಿಜಯ್‌ ದೇವರಕೊಂಡ ಅಭಿನಯದ ‘ಫೈಟರ್‌’ ಚಿತ್ರವನ್ನು ಪುರಿ ಜಗನ್ನಾಥ್‌ ನಿರ್ದೇಶನ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.