ADVERTISEMENT

‘ರಾಂಧವ’ ಸ್ವಾತಂತ್ರ್ಯ ದಿನಾಚರಣೆಗೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:31 IST
Last Updated 1 ಆಗಸ್ಟ್ 2019, 19:31 IST
ಭುವನ್‌ ಪೊನ್ನಣ್ಣ
ಭುವನ್‌ ಪೊನ್ನಣ್ಣ   

ಬಿಗ್‍ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸಿರುವ ‘ರಾಂಧವ’ ಚಿತ್ರ ಸ್ವಾತಂತ್ರ್ಯ ದಿನಾಚರಣೆಯಂದು ತೆರೆಗೆ ಬರಲು ಸಜ್ಜಾಗಿದೆ.

ಮೂರು ಶೇಡ್‌ಗಳಲ್ಲಿ ಭುವನ್‌ ಕಾಣಿಸಿಕೊಂಡಿದ್ದಾರೆ. ಮೊದಲನೇ ಶೇಡ್‍ನಲ್ಲಿರಾಬರ್ಟ್ ಹೆಸರಿನಲ್ಲಿ ಮಿತಭಾಷಿ ಪಕ್ಷಿತಜ್ಞನಾಗಿ, ಎರಡನೇ ಶೇಡ್‌ನಲ್ಲಿಎಲ್ಲರೊಂದಿಗೆ ಬಾಂಧವ್ಯವಿರುವ ರಾಂಧವದ ಯುವರಾಜನಾಗಿ ಹಾಗೂ ಮೂರನೇ ಶೇಡ್‌ನಲ್ಲಿ ಸಾಮಾನ್ಯ ಮನುಷ್ಯನಾಗಿ, ಅದರಲ್ಲೂ ಲವರ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದಾರೆ.

ನಾಯಕಿಯರಾಗಿ ಅಪೂರ್ವ ಶ್ರೀನಿವಾಸನ್ ಮತ್ತು ರಾಶಿ ನಟಿಸಿದ್ದಾರೆ. ಇನ್ನು, ರಾಂಧವ ಭಾಗ–2 ಸಿನಿಮಾದಲ್ಲಿಮೂರನೇ ನಾಯಕಿಯ ಹೆಸರನ್ನು ಬಹಿರಂಗಪಡಿಸಲಿದೆಯಂತೆ ಚಿತ್ರತಂಡ.

ADVERTISEMENT

ಚಿತ್ರ ಬಿಡುಗಡೆ ಬಗ್ಗೆ ಮಾಹಿತಿ ನೀಡಲು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾದ ನಿರ್ದೇಶಕಸುನಿಲ್‍ ಆಚಾರ್ಯ, ಯಾರ ಬಳಿಯೂ ಕೆಲಸ ಮಾಡದೆ, ಸುಮಾರು280ಕ್ಕೂ ಹೆಚ್ಚು ಚಿತ್ರಗಳನ್ನು ವೀಕ್ಷಿಸಿ, ಸಿನಿಮಾ ವೀಕ್ಷಣೆಯಲ್ಲೇ ನಿರ್ದೇಶನ ಕಲಿತು, ಚಿತ್ರಕ್ಕೆ ಕಥೆ ಬರೆದು, ನಿರ್ದೇಶನವನ್ನೂ ಮಾಡಿರುವುದಾಗಿ ಹೇಳಿಕೊಂಡರು.

ಚಿತ್ರದಲ್ಲಿರುವ ಆರು ಗೀತೆಗಳ ಧ್ವನಿ ಸುರುಳಿಯನ್ನು ಗೌರಮ್ಮ, ರತ್ನಮ್ಮ,ರಾಜಣ್ಣ ಮತ್ತು ಕೆಂಪರಾಜಣ್ಣ ರೈತ ದಂಪತಿಬಿಡುಗಡೆ ಮಾಡಿದರು. ನಿರ್ದೇಶಕರು ಬಾಲ್ಯದಲ್ಲಿರುವಾಗ ಎತ್ತಿ ಆಡಿಸಿದ ಕಾರಣಕ್ಕೆ ಈ ಹಿರಿಯ ಜೀವಿಗಳಿಂದ ಧ್ವನಿ ಸುರುಳಿ ಬಿಡುಗಡೆ ಮಾಡಿಸಿ, ಆಶೀರ್ವಾದ ಪಡೆದರು.

ಭರತನಾಟ್ಯ ಕಲಾವಿದೆ ಯಮುನಾ ಮೂರ್ತಿ ಚಿತ್ರದಲ್ಲೂ ಭರತನಾಟ್ಯ ಪ್ರವೀಣೆಯಾಗಿ ಕಾಣಿಸಿದ್ದಾರಂತೆ. ಖಳನಟನಾಗಿ ರಂಗಿತರಂಗ ಅರವಿಂದ್ ಕಾಣಿಸಿದ್ದಾರೆ. ಜಹಾಂಗೀರ್, ಮಂಜುನಾಥ್‍ ಹೆಗ್ಗಡೆ, ವಾಣಿಶ್ರೀ, ಲಕ್ಷ್ಮಿ ಹೆಗಡೆ ತಾರಾಗಣದಲ್ಲಿದ್ದಾರೆ.

ಬಾಳೂರು, ಮೂಡಿಗೆರೆ, ಶಿವಕೋಟೆ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದ ಒಂದು ಗೀತೆಯನ್ನು 28 ಜಿಲ್ಲೆಗಳಲ್ಲಿ ಚಿತ್ರೀಕರಿಸಲಾಗಿದೆ. ಗಾಯಕ ಶಶಾಂಕ್‌ ಶೇಷಗಿರಿ ಎರಡು ಗೀತೆಗಳನ್ನು ಹಾಡುವ ಜತೆಗೆ ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.ಮಗ ನಿರ್ದೇಶಕನಾಗಿರುವ ಸಿನಿಮಾಕ್ಕೆ ಸನತ್‍ಕುಮಾರ್.ಎಸ್.ಆರ್. ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.