ನಿರ್ದೇಶಕಿ ಜೋಯಾ ಅಖ್ತರ್ ಈಗ ಸಂಭ್ರಮಾಚರಣೆ ಮೂಡ್ನಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ನಿರ್ದೇಶನದ ‘ಗಲ್ಲಿ ಬಾಯ್’ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಈ ಸಿನಿಮಾದಲ್ಲಿ ನಟಿಸಿದ್ದ ನಟ ರಣವೀರ್ ಸಿಂಗ್ ಹಾಗೂ ಜೋಯಾ ಅಖ್ತರ್ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಮಾಡಲು ಸಿದ್ಧರಾಗಿದ್ದಾರೆ.ಈ ಜೋಡಿ ಸದ್ಯದಲ್ಲೇ ಗ್ಯಾಂಗ್ಸ್ಟರ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ರಣವೀರ್ ಹೊಸ ಅವತಾರ
ಜೋಯಾ ಅಖ್ತರ್ ಈ ಸಿನಿಮಾ ನಿರ್ದೇಶನ ಮಾಡಲಿದ್ದು, ರಣವೀರ್ ನಾಯಕನಾಗಿ ನಟಿಸಲಿದ್ದಾರೆ.ಚಿತ್ರಕತೆಯನ್ನು ಜೋಯಾ ಸಿದ್ಧ ಮಾಡುತ್ತಿದ್ದಾರೆ. ಎಲ್ಲವೂ ಸರಿಹೋದರೆ ಈ ಜೋಡಿ ಒಟ್ಟಿಗೆ ಮಾಡುತ್ತಿರುವ ಮೂರನೇ ಚಿತ್ರ ಇದಾಗಲಿದೆ. ಈ ಹಿಂದೆ ಜೋಯಾ ಅವರ ‘ದಿಲ್ ಧಡಕ್ನೇ ದೊ’ ಹಾಗೂ ‘ಗಲ್ಲಿ ಬಾಯ್’ಯಲ್ಲಿ ಒಟ್ಟಿಗೆ ನಟಿಸಿದ್ದರು.
ಶ್ರೀಮಂತಿಕೆ, ಅದ್ದೂರಿತನದ ಕುರಿತಾಗಿಯೇ ಜೋಯಾ ಅಖ್ತರ್ ಸಿನಿಮಾ ಮಾಡುತ್ತಾರೆ ಎಂದು ಬಾಲಿವುಡ್ನಲ್ಲಿ ಈ ಹಿಂದೆ ಟೀಕೆ ವ್ಯಕ್ತವಾಗಿತ್ತು. ‘ಗಲ್ಲಿಬಾಯ್ ಸಿನಿಮಾವು ಮುಂಬೈನ ಸ್ಲಂನಿಂದ ಬಂದ ರಾಪ್ ಸಂಗೀತಗಾರನೊಬ್ಬ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಕುರಿತಾಗಿದೆ. ಮುಂದಿನ ಸಿನಿಮಾವು ಸಹ ಚಿತ್ರಕತೆಹಾಗೂ ನಿರ್ಮಾಣದಲ್ಲಿ ವಿಭಿನ್ನವಾಗಿರಲಿದೆ ಎಂದು ಬಾಲಿವುಡ್ ಮಾತನಾಡಿಕೊಳ್ಳುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.