ADVERTISEMENT

"ಹೇಗಿದ್ದೆ ನಾನು ಹೀಗಾಗಿಬಿಟ್ಟೆ": ಉಳುಮೆ ಮಾಡುತ್ತಿರುವ ರಶ್ಮಿಕಾ ಮಂದಣ್ಣ!

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 10:20 IST
Last Updated 18 ಮಾರ್ಚ್ 2021, 10:20 IST
ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್ ವಿಡಿಯೊ ಸ್ಕ್ರೀನ್ ಶಾಟ್
ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್ ವಿಡಿಯೊ ಸ್ಕ್ರೀನ್ ಶಾಟ್   

ಬೆಂಗಳೂರು: ಕನ್ನಡದ ಜನಪ್ರಿಯ ಚಿತ್ರ ‘ಕಿರಿಕ್ ಪಾರ್ಟಿ’ ಮೂಲಕ ಮನೆ ಮಾತಾದ ನಟಿ ರಶ್ಮಿಕಾ ಮಂದಣ್ಣ ಆ ಬಳಿಕ ತಿರುಗಿ ನೋಡಿದ್ದೇ ಇಲ್ಲ.

ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳ ಹಲವು ಚಿತ್ರಗಳಲ್ಲಿ ನಟಿಸಿದ್ಧಾರೆ. ಗೀತಾ ಗೋವಿಂದಂ ಚಿತ್ರ ಅವರಿಗೆ ಬಹಳ ಹೆಸರು ತಂದುಕೊಟ್ಟಿತ್ತು. ಸರಿಲೇರು ನೀಕೆವ್ವರು ಚಿತ್ರದಲ್ಲಿ ರಶ್ಮಿಕಾ ಅಭಿನಯದ ಹಾಡು ಸೂಪರ್ ಹಿಟ್ ಆಗಿತ್ತು. ಇದಲ್ಲದೆ, ಅಂಜನಿಪುತ್ರ, ಚಮಕ್, ಚಲೋ, ದೇವದಾಸ್, ಯಜಮಾನ, ಇತ್ತೀಚೆಗೆ ತೆರೆಕಂಡ ಪೊಗರುಮುಂತಾದ ಚಿತ್ರಗಳಲ್ಲಿ ಅವರು ಸಿನಿ ರಸಿಕರನ್ನು ರಂಜಿಸಿದ್ದಾರೆ.

ಅಂದಹಾಗೆ, ಈಗ ರಶ್ಮಿಕಾ ಬಗ್ಗೆ ಹೇಳುತ್ತಿರುವುದಕ್ಕೆ ಕಾರಣವಿದೆ. ತಮಿಳಿನ ಹೊಸ ಚಿತ್ರದವೊಂದರಲ್ಲಿ ನಟಿಸುತ್ತಿರುವ ಅವರು ಟಿಲ್ಲರ್ ಹಿಡಿದು ಗದ್ದೆಯಲ್ಲಿ ಉಳುಮೆ ಮಾಡುತ್ತಿರುವ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೊ ವೈರಲ್ ಆಗಿದೆ.

ADVERTISEMENT

ತಮಿಳಿನಲ್ಲಿ ಕಾರ್ತಿ ನಾಯಕರಾಗಿ ನಟಿಸುತ್ತಿರುವ 'ಸುಲ್ತಾನ್' ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರದಲ್ಲಿ ರಶ್ಮಿಕಾ, ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ, ಗದ್ದೆಯಲ್ಲಿ ಟಿಲ್ಲರ್ ಹಿಡಿದು ಉಳುಮೆ ಮಾಡುತ್ತಿರುವ ಶೂಟಿಂಗ್ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. "ಎಪ್ಪುಡಿ ಇರುಂದೆ ನಾಂಗೆ ಇಪ್ಪುಡೀ ಆಯಿಟ್ಟೋ" ಎಂಬ ಹಾಡು ಬ್ಯಾಗ್ರೌಂಡಲ್ಲಿಕೇಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.