ADVERTISEMENT

ರಶ್ಮಿಕಾ ಮಂದಣ್ಣ ಮುಂದಿನ ಚಿತ್ರ ‘ದಿ ಗರ್ಲ್‌ಫ್ರೆಂಡ್’: ಫಸ್ಟ್ ಲುಕ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2023, 7:52 IST
Last Updated 22 ಅಕ್ಟೋಬರ್ 2023, 7:52 IST
Venugopala K.
   Venugopala K.

ಹೈದರಾಬಾದ್: ವೃತ್ತಿ ಜೀವನದ ಉತ್ತುಂಗದಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರ ಮುಂದಿನ ಚಿತ್ರ ಘೋಷಣೆಯಾಗಿದೆ. ತೆಲುಗಿನ ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ ನಿರ್ಮಿಸುತ್ತಿರುವ ‘ದಿ ಗರ್ಲ್‌ಫ್ರೆಂಡ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ಚಿತ್ರ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್, ಈ ಮಾಹಿತಿಯನ್ನು ಎಕ್ಸ್‌ ಪುಟದಲ್ಲಿ ಹಂಚಿಕೊಂಡಿದ್ದು, ಫಸ್ಟ್ ಲುಕ್ ಸಹ ಬಿಡುಗಡೆ ಮಾಡಿದೆ.

ಮನ್ಮಥುಡು–2 ಖ್ಯಾತಿಯ ನಿರ್ದೇಶಕ ರಾಹುಲ್ ರವೀಂದ್ರನ್, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ADVERTISEMENT

'ಜಗತ್ತು ಅದ್ಭುತವಾದ ಪ್ರೇಮಕಥೆಗಳಿಂದ ತುಂಬಿದೆ. ಆದರೆ, ಇದುವರೆಗೆ ಕೇಳಿರದ ಅಥವಾ ನೋಡದ ಕೆಲವು ಪ್ರೇಮಕಥೆಗಳಿವೆ. ‘ದಿ ಗರ್ಲ್‌ಫ್ರೆಂಡ್’ ಸಹ ಅಂತಹದ್ದೇ ಒಂದು. ಗೀತಾ ಆರ್ಟ್ಸ್ ಪ್ರೊಡಕ್ಷನ್‌ನ.51ನೇ ಚಿತ್ರ’ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

‘ಅನಿಮಲ್’ ಮತ್ತು ‘ಪುಷ್ಪ: ದಿ ರೂಲ್’ ಚಿತ್ರಗಳ ಬಿಡುಗಡೆಗಾಗಿ ರಶ್ಮಿಕಾ ಕಾಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.