ADVERTISEMENT

ಹೊಸದಾಗಿ ಫೋಟೊಶೂಟ್‌ ಮಾಡಿಸಿದ ರಶ್ಮಿಕಾ ಮಂದಣ್ಣ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 11:18 IST
Last Updated 2 ಫೆಬ್ರುವರಿ 2020, 11:18 IST
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ   
""
""
""

ನಟಿ ರಶ್ಮಿಕಾ ಮಂದಣ್ಣ ತೆಲುಗಿನ ‘ಸರಿಲೇರು ನೀಕೆವ್ವರು’ ಚಿತ್ರದ ಗೆಲುವಿನ ಖುಷಿಯಲ್ಲಿದ್ದಾರೆ. ಈ ಚಿತ್ರದ ಮೂಲಕ ಅವರು ಮೊದಲ ಬಾರಿಗೆ ‘ಟಾಲಿವುಡ್‌ ಪ್ರಿನ್ಸ್’ ಮಹೇಶ್‌ಬಾಬು ಜೊತೆಗೆ ತೆರೆ ಹಂಚಿಕೊಂಡಿದ್ದರು. ವಿಜಯ ದೇವರಕೊಂಡ ಜೊತೆಗೆ ನಟಿಸಿದ್ದ ‘ಡಿಯರ್ ಕಾಮ್ರೇಡ್‌’ ಚಿತ್ರದ ಸೋಲು ಮತ್ತು ಐಟಿ ದಾಳಿಯಿಂದ ಕೆಂಗೆಟ್ಟಿದ್ದ ರಶ್ಮಿಕಾಗೆ ಈ ಚಿತ್ರದ ಯಶಸ್ಸು ಹೊಸ ಹುಮ್ಮಸ್ಸು ತುಂಬಿರುವುದಂತೂ ಸತ್ಯ. ಜೊತೆಗೆ, ತೆಲುಗಿನಲ್ಲಿ ಮತ್ತಷ್ಟು ಅವಕಾಶಗಳಿಗೆ ಈ ಗೆಲುವು ರತ್ನಗಂಬಳಿ ಹಾಸುವುದರಲ್ಲಿ ಅನುಮಾನವಿಲ್ಲ ಎನ್ನುವುದು ಆಕೆಯ ಅಭಿಮಾನಿಗಳ ಲೆಕ್ಕಾಚಾರ.

ಸದ್ಯ ಅವರು ಅಲ್ಲು ಅರ್ಜುನ್‌ ಜೊತೆಗೆ ಹೊಸ ಚಿತ್ರದಲ್ಲಿ ಸೊಂಟ ಬಳುಕಿಸಲು ಸಿದ್ಧವಾಗಿದ್ದಾರೆ. ಮತ್ತೊಂದೆಡೆ ‘ಅಲಾ ವೈಕುಂಠಪುರಮುಲೋ’ ಚಿತ್ರದ ಯಶಸ್ಸಿನ ಅಲೆಯಲ್ಲಿ ಅಲ್ಲು ಅರ್ಜುನ್‌ ಕೂಡ ತೇಲುತ್ತಿದ್ದಾರೆ. ಶೀಘ್ರವೇ, ಹೊಸ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ. ಅಂದಹಾಗೆ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳುತ್ತಿರುವುದು ಸುಕುಮಾರ್.

ಮತ್ತೊಂದೆಡೆ ತಮಿಳಿನ ‘ಸುಲ್ತಾನ್‌’ ಚಿತ್ರದಲ್ಲಿ ನಟಿಸಲು ರಶ್ಮಿಕಾ ತಯಾರಿ ನಡೆಸುತ್ತಿದ್ದಾರೆ. ಕಾಲಿವುಡ್‌ನಲ್ಲಿ ಇದು ಅವರ ಮೊದಲ ಚಿತ್ರ. ಇದನ್ನು ನಿರ್ದೇಶಿಸಿರುವುದುಬಕ್ಕಿಯರಾಜ್ ಕಣ್ಣನ್. ಈ ನಡುವೆಯೇ ರಶ್ಮಿಕಾ ಹೊಸ ಫೋಟೊಶೂಟ್‌ ಮಾಡಿಸಿದ್ದಾರೆ. ವಿವಿಧ ಭಂಗಿಯಲ್ಲಿ ಆಕೆ ಕ್ಯಾಮೆರಾಕ್ಕೆ ಪೋಸ್‌ನೀಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ADVERTISEMENT

ಕನ್ನಡದಲ್ಲಿ ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರಕ್ಕೂ ರಶ್ಮಿಕಾ ಅವರೇ ನಾಯಕಿ. ಈ ಚಿತ್ರದಲ್ಲಿ ಅವರದು ಶಿಕ್ಷಕಿಯ ಪಾತ್ರ. ಮಾರ್ಚ್‌ ಅಂತ್ಯಕ್ಕೆ ಈ ಸಿನಿಮಾ ಥಿಯೇಟರ್‌ಗೆ ಬರುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.