ADVERTISEMENT

ನೈಜ ಘಟನೆ ಆಧಾರಿತ 'ವಿ 3' ಚಿತ್ರ ತೆರೆಗೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 6:30 IST
Last Updated 6 ಜನವರಿ 2023, 6:30 IST
ವರಲಕ್ಷ್ಮಿ ಶರತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ 'ವಿ 3' ಸಿನಿಮಾ
ವರಲಕ್ಷ್ಮಿ ಶರತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ 'ವಿ 3' ಸಿನಿಮಾ   

ವರಲಕ್ಷ್ಮಿ ಶರತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ 'ವಿ 3' ಸಿನಿಮಾ ಶುಕ್ರವಾರ ತೆರೆ ಕಂಡಿದೆ.

ಕನ್ನಡದ ಪಾವನಾ ಗೌಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅದುಕುಲಂ ನರೆನ್, ಈಸ್ಟರ್ ಅನಿಲ್ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನೈಜ ಕಥೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಅಪ್ಪ, ಮಗಳು ಹೀಗೆ ಸುಖ ಸಂಸಾರ. ಇದ್ದಕ್ಕಿದ್ದಂತೆ ಇವರ ಮೇಲೆ ಒಂದು ದಿನ ಕರಿ ಕಾರ್ಮೋಡ ಸರಿದಂತೆ ಒಂದು ಘಟನೆ ನಡೆಯುತ್ತದೆ.

ADVERTISEMENT

ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಗುರಿ ಸಾಧಿಸುವ ಕಡೆ ಹೆಜ್ಜೆ ಇಡುತ್ತಿದ್ದ ಮಗಳ ಜೀವನದಲ್ಲಿ ಒಂದು ಕೆಟ್ಟ ಘಟನೆ ನಡೆಯುತ್ತದೆ. ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಅವಳ ಬದುಕು, ಗೊತ್ತು ಗುರಿ ಇಲ್ಲದಂತೆ ಆಗುತ್ತದೆ.

ಐಎಎಸ್ ವರಲಕ್ಷ್ಮಿ ನಡೆಸುವ ತನಿಖೆಯಿಂದ ಈ ಕುಟುಂಬಕ್ಕೆ ನ್ಯಾಯ ಸಿಗಬಹುದಾ ಅನ್ನೋದೇ ಈ ಸಿನಿಮಾದ ರೋಚಕತೆ.

'ವಿಂಧ್ಯಾ ಸಂತ್ರಸ್ತೆ ತೀರ್ಪು ' ಸ್ಪೂರ್ತಿ ಪಡೆದು ಈ ಸಿನಿಮಾ ರೂಪುಗೊಂಡಿದೆ. ಅಮುದವನ್ ನಿರ್ದೇಶನ, ಶಿವ ಪ್ರಭು ಕ್ಯಾಮರಾ ಈ ಸಿನಿಮಾಕ್ಕೆ ಇದೆ.

ಕನ್ನಡ, ತಮಿಳು, ತೆಲುಗು ಮೂರು ಭಾಷೆಯಲ್ಲಿ ದೇಶದ 450 ಸಿನಿಮಾ ಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.