ADVERTISEMENT

‘ಸಲಗ’ ಮಾಸ್‌ ಪೋಸ್ಟರ್‌ಗೆ ವಿಜಿ ಅಭಿಮಾನಿಗಳು ಫಿದಾ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 9:46 IST
Last Updated 29 ಅಕ್ಟೋಬರ್ 2019, 9:46 IST
‘ದುನಿಯಾ‘ ವಿಜಯ್‌
‘ದುನಿಯಾ‘ ವಿಜಯ್‌   

‘ದುನಿಯಾ’ ವಿಜಯ್‌ ಮೊದಲ ಬಾರಿಗೆ ನಿರ್ದೇಶಿಸಿರುವ ‘ಸಲಗ’ ಚಂದನವನದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿರುವ ಚಿತ್ರ. ಕಳೆದ ವರ್ಷ ತೆರೆಕಂಡ ಅವರು ನಾಯಕರಾಗಿದ್ದ ‘ಕನಕ’ ಮತ್ತು ‘ಜಾನಿ ಜಾನಿ ಯಸ್‌ ಪಪ್ಪಾ’ ಚಿತ್ರಗಳಿಗೆ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಹಾಗಾಗಿ, ಈ ಚಿತ್ರದ ಮೇಲೆ ವಿಜಿಯ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.

ಅದ್ದೂರಿ ಮೇಕಿಂಗ್‌ನಿಂದಲೇ ಈ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈಗ ದೀಪಾಬಳಿ ಹಬ್ಬಕ್ಕೆ ಸಲಗದ ಮಾಸ್‌ ಪೋಸ್ಟರ್ ಕೂಡ ಬಿಡುಗಡೆಗೊಂಡಿದೆ. ವಿಜಯ್‌ ಅವರ ಲುಕ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಪೋಸ್ಟರ್‌ ಅನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೈಯಲ್ಲಿ ಲಾಂಗ್ ಹಿಡಿದು ವಿಜಿ ಖಡಕ್ ಲುಕ್ ನೀಡಿದ್ದಾರೆ. ‘ಬಲದಲ್ಲಿ ಛಲದಲ್ಲಿ ಸಲಗ, ನೆಲದಲ್ಲಿ ಕುಲದಲ್ಲಿ ಕನ್ನಡಿಗ’ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಇದು ಭೂಗತ ಲೋಕದ ಕಥೆ. ಈಗಾಗಲೇ, ಚಿತ್ರದ ಟಾಕಿ ಪೋರ್ಷನ್‌ ಪೂರ್ಣಗೊಂಡಿದೆ. ಚಿತ್ರತಂಡ ಮ್ಯೂಸಿಕ್ ಕಂಪೋಸಿಂಗ್‌ನಲ್ಲೂ ತೊಡಗಿಸಿಕೊಂಡಿದೆ.

ADVERTISEMENT

ಸಂಜನಾ ಆನಂದ್ ಈ ಚಿತ್ರದ ನಾಯಕಿ. ‘ಡಾಲಿ’ ಖ್ಯಾತಿಯ ಧನಂಜಯ್ ಎಸಿಪಿಯಾಗಿ ಕಾಣಿಸಿಕೊಂಡಿದ್ದಾರೆ. ‘ಟಗರು’ ಚಿತ್ರದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರ ತಂಡವೇ ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದು ವಿಜಯ್‌ಗೆ ಆನೆ ಬಲ ತಂದಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಚರಣ್‌ರಾಜ್‌ ಸಂಗೀತ ಸಂಯೋಜಿಸಿದ್ದಾರೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಕೆ.ಪಿ. ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.