ADVERTISEMENT

ಲಾಕ್‌ಡೌನ್‌ ಬಲೆಯಲ್ಲಿ ಸಲ್ಮಾನ್!

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 19:30 IST
Last Updated 7 ಏಪ್ರಿಲ್ 2020, 19:30 IST
ಸಲ್ಮಾನ್‌ ಖಾನ್‌
ಸಲ್ಮಾನ್‌ ಖಾನ್‌   

ಸ್ನೇಹಿತರನ್ನು, ಬಂಧುಗಳನ್ನು ಭೇಟಿ ಮಾಡದೆ ವಾರಗಳೇ ಕಳೆಯಿತು ಎಂದು ಬೇಸರಪಟ್ಟುಕೊಳ್ಳುವವರ ಸಾಲಿಗೆ ಈಗ ಸೆಲೆಬ್ರಿಟಿಯೊಬ್ಬರು ಸೇರಿಕೊಂಡಿದ್ದಾರೆ. ಆ ಸೆಲೆಬ್ರಿಟಿ ಬೇರೆ ಯಾರೂ ಅಲ್ಲ. ಬಾಲಿವುಡ್‌ ನಟ ಸಲ್ಮಾನ್‌ ಖಾನ್ ಅವರು ತಮ್ಮ ತಂದೆ ಸಲೀಂ ಖಾನ್ ಅವರನ್ನು ಭೇಟಿ ಮಾಡಿ ಮೂರು ವಾರಗಳು ಕಳೆದಿವೆ!

ಸಲ್ಮಾನ್ ಈಗ ಮುಂಬೈ ಹೊರವಲಯದ ಪನವೆಲ್‌ನಲ್ಲಿ ಇರುವ ತೋಟದ ಮನೆಯಲ್ಲಿ ಇದ್ದಾರೆ. ಕೊರೊನಾ ಸೃಷ್ಟಿಸಿದ ಲಾಕ್‌ಡೌನ್‌ ಸ್ಥಿತಿಯ ಪರಿಣಾಮವಾಗಿ ಅವರಿಗೆ ತಮ್ಮ ತಂದೆಯನ್ನು ಭೇಟಿ ಮಾಡಲು ಆಗಿಲ್ಲ. ‘ನಾನು ಮತ್ತು ನಿರ್ವಾಣ್ (ಸಲ್ಮಾನ್ ಸಹೋದರ ಸೊಹೈಲ್ ಖಾನ್ ಮಗ) ಕೆಲವು ದಿನಗಳ ಮಟ್ಟಿಗೆ ಎಂದು ತೋಟದ ಮನೆಗೆ ಬಂದಿದ್ದೆವು. ಆದರೆ, ಈಗ ಇಲ್ಲಿಯೇ ಉಳಿದುಕೊಳ್ಳಬೇಕಾಗಿದೆ’ ಎಂದು ಸಲ್ಮಾನ್ ಅವರು ಟ್ವಿಟರ್ ಖಾತೆ ಮೂಲಕ ತಿಳಿಸಿದ್ದಾರೆ.

‘ನಾವು ಹೆದರಿಬಿಟ್ಟಿದ್ದೇವೆ. ಅಪ್ಪನನ್ನು ಮೂರು ವಾರಗಳಿಂದ ನೋಡಲು ಆಗಿಲ್ಲ. ನಾವು ಇಲ್ಲಿದ್ದೇವೆ. ಅಪ್ಪ ಅಲ್ಲಿ ಮನೆಯಲ್ಲಿ ಒಬ್ಬರೇ ಇದ್ದಾರೆ’ ಎಂದು ಹೇಳಿದ್ದಾರೆ. ಸಲ್ಮಾನ್ ತಂದೆ ಸಲೀಂ ಅವರು ಲೇಖಕ ಕೂಡ
ಹೌದು.

ADVERTISEMENT

‘ಶೋಲೆ’ ಚಿತ್ರದ ಒಂದು ಡೈಲಾಗ್‌ ಉಲ್ಲೇಖಿಸಿರುವ ಸಲ್ಮಾನ್‌, ‘ನಿಮಗೆ ಆ ಡೈಲಾಗ್ ನೆನಪಿರಬಹುದು. ಯಾರು ಹೆದರುತ್ತಾರೋ ಅವರು ಸತ್ತಂತೆಯೇ ಎಂದು ತಿಳಿ’. ಇದು ಆ ಚಿತ್ರದ ಡೈಲಾಗ್. ಆದರೆ, ಈ ಸಂದರ್ಭಕ್ಕೆ ಆ ಮಾತು ಅನ್ವಯ ಆಗುವುದಿಲ್ಲ. ನಾವು ಈಗ ಭಯಭೀತರಾಗಿದ್ದೇವೆ ಎಂಬುದನ್ನು ಧೈರ್ಯದಿಂದ ಒಪ್ಪಿಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ಹೆಚ್ಚು ಧೈರ್ಯ ತೋರಿಸಲು ಮುಂದಾಗಬೇಡಿ’ ಎಂದು ಸಲ್ಮಾನ್ ಹೇಳಿದ್ದಾರೆ.

ಸಲ್ಮಾನ್ ಅವರ ಪ್ರಕಾರ ಈ ಸಂದರ್ಭಕ್ಕೆ ಅನ್ವಯ ಆಗುವ ಮಾತು ‘ಯಾರು ಹೆದರಿಕೊಳ್ಳುತ್ತಾರೋ ಅವರು ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ತಮ್ಮ ಜೊತೆಯಲ್ಲೇ, ತಮ್ಮ ಸುತ್ತಲಿನವರನ್ನೂ ರಕ್ಷಿಸುತ್ತಾರೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.