ADVERTISEMENT

ಸಹೋದರನ ಪುತ್ರ ನಿರ್ವಾನ್‌ ಖಾನ್‌ ಜೊತೆಗಿನ ಫೋಟೊ ಹಂಚಿಕೊಂಡ ಸಲ್ಮಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2021, 10:33 IST
Last Updated 28 ಆಗಸ್ಟ್ 2021, 10:33 IST
ನಿರ್ವಾನ್‌ ಖಾನ್‌, ಸಲ್ಮಾನ್‌ ಖಾನ್‌- ಇನ್‌ಸ್ಟಾಗ್ರಾಮ್‌ ಚಿತ್ರ
ನಿರ್ವಾನ್‌ ಖಾನ್‌, ಸಲ್ಮಾನ್‌ ಖಾನ್‌- ಇನ್‌ಸ್ಟಾಗ್ರಾಮ್‌ ಚಿತ್ರ    

ರಷ್ಯಾದಲ್ಲಿ ನಡೆಯುತ್ತಿರುವ 'ಟೈಗರ್‌ 3' ಸಿನಿಮಾದಚಿತ್ರೀಕರಣವನ್ನು ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್‌ ಖಾನ್‌ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಅವರು ರಷ್ಯಾದಲ್ಲಿನ ತಮ್ಮ ಅಭಿಮಾನಿಗಳೊಂದಿಗೆ ತೆಗೆಸಿಕೊಳ್ಳುತ್ತಿರುವ ಸೆಲ್ಫಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಇವೆ.

ಸಲ್ಮಾನ್‌ ಸಹೋದರ ಸೊಹೈಲ್‌ ಖಾನ್‌ ಅವರ ಪುತ್ರ ನಿರ್ವಾನ್‌ ಖಾನ್‌ ಸಹ ರಷ್ಯಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. ನಿರ್ವಾನ್‌ ಜೊತೆಗಿನ ಫೋಟೊವನ್ನು ಸಲ್ಮಾನ್‌ ಖಾನ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

'ಚಾಚಾ(ಚಿಕ್ಕಪ್ಪ), ಬತೀಜಾ(ಸಹೋದರನ ಮಗ)' ಎಂದು ಸಲ್ಮಾನ್‌ ಬರೆದುಕೊಂಡಿದ್ದು, ಚಿತ್ರವು ವೈರಲ್‌ ಆಗಿದೆ.

ADVERTISEMENT

ಈಗಾಗಲೇ ಟೈಗರ್–3 ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಂಬೈನಲ್ಲಿ ಮುಕ್ತಾಯವಾಗಿದೆ. ಇದರಲ್ಲಿ ಕತ್ರಿನಾ ಕೂಡ ಭಾಗಿಯಾಗಿದ್ದರು.

ಇದೀಗ ರಷ್ಯಾ, ಆಸ್ಟ್ರೀಯ ಹಾಗೂ ಟರ್ಕಿಯಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಆಗಸ್ಟ್ 18ರಂದು ಪ್ರಯಾಣ ಬೆಳೆಸಿರುವ ಚಿತ್ರತಂಡ 45 ದಿನಗಳ ಕಾಲ ವಿದೇಶಗಳಲ್ಲಿ ತಂಗಲಿದೆ.

ಮನೀಶ್‌ಶರ್ಮಾ ಟೈಗರ್‌–3 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲೂ ಸಲ್ಮಾನ್ ಮತ್ತು ಕತ್ರಿನಾ, ಟೈಗರ್ ಹಾಗೂ ಜೋಯಾ ಪಾತ್ರಗಳಲ್ಲಿ ಮುಂದುವರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.