ADVERTISEMENT

ನಟಿ ಸಮಂತಾ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2023, 5:08 IST
Last Updated 28 ಆಗಸ್ಟ್ 2023, 5:08 IST
Venugopala K.
   Venugopala K.

ನವದೆಹಲಿ: ತೆಲುಗು ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾದ ಸಮಂತಾ ರುತ್ ಪ್ರಭು, ವಿಜಯ್ ದೇವರಕೊಂಡ ಜೊತೆ ನಟಿಸಿರುವ ಖುಷಿ ಚಿತ್ರದ ಮೂಲದ ತೆರೆ ಮೇಲೆ ಮೋಡಿ ಮಾಡಲು ಸಿದ್ಧವಾಗಿದ್ದಾರೆ. ಈ ನಡುವೆ ಆಕರ್ಷಕ ‘ಬಾಡಿ ಹಗ್ಗಿಂಗ್’ ಉಡುಗೆ ಮೂಲಕ ಫೋಟೊಶೂಟ್ ಮಾಡಿಸಿಕೊಂಡು ಅಂತರ್ಜಾಲದಲ್ಲಿ ಸದ್ದು ಮಾಡಿದ್ದಾರೆ.

ಬಂಗಾರದ ಬಣ್ಣದ ಮಿನುಗುವ ಗೌನ್ ಡ್ರೆಸ್‌ನಲ್ಲಿ ಸಮಂತಾ ಅವರ ಬೆರಗುಗೊಳಿಸುವ ಚಿತ್ರವನ್ನು ಹೆಸರಾಂತ ಛಾಯಾಗ್ರಾಹಕ ವೈಷ್ಣವ್ ಪ್ರವೀಣ್ ಅವರು ಸೆರೆ ಹಿಡಿದಿದ್ದಾರೆ.

ಆಕರ್ಷಕ ಮೇಕಪ್, ಹೊಳಪು ತುಟಿ ಬಣ್ಣ ಮತ್ತು ಫ್ರೀ ಹೇರ್ ಸ್ಟೈಲ್‌ನಲ್ಲಿ ಗಮನ ಸೆಳೆದಿದ್ದಾರೆ.

ADVERTISEMENT

ನಟಿಯ ಈ ಚೆಂದದ ಚಿತ್ರಕ್ಕೆ ಅಭಿಮಾನಿಗಳು ಹೃದಯ ಮತ್ತು ಬೆಂಕಿಯ ಎಮೋಜಿಗಳನ್ನು ಹರಿಬಿಟ್ಟಿದ್ದಾರೆ. 'ಡ್ರಾಪ್ ಡೆಡ್ ಗಾರ್ಜಿಯಸ್', 'ಸ್ಯಾಮ್ ಆಲ್ವೇಸ್ ಕ್ವೀನ್, ಸಮಂತಾ ಈಸ್ ಮೈ ಲವ್ಲಿ ಸಿಸ್ಟರ್' ಎಂಬಿತ್ಯಾದಿ ಕಾಮೆಂಟ್‌ಗಳು ಬಂದಿವೆ.

ಸಮಂತಾ ಇನ್‌ಸ್ಟಾಗ್ರಾಂನ ಸಕ್ರಿಯ ಬಳಕೆದಾರರಾಗಿದ್ದು, ತಮ್ಮ ಮನಮೋಹಕ ಚಿತ್ರಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಾ ಇರುತ್ತಾರೆ.

ಸಮಂತಾ ಖುಷಿ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ವಿಜಯ್ ದೇವರಕೊಂಡ ಮತ್ತು ಸಮಂತಾ ನಟಿಸಿರುವ ಎರಡನೇ ಚಿತ್ರ ಇದಾಗಿದ್ದು, 2018ರ 'ಮಹಾನಟಿ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.