ADVERTISEMENT

2018ರಲ್ಲೇ ಇಸ್ಲಾಂಗೆ ಮತಾಂತರಗೊಂಡು 'ಮಹೀರಾ' ಆಗಿ ಬದಲಾಗಿದ್ದ ಸಂಜನಾ ಗಲ್ರಾನಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 6:30 IST
Last Updated 19 ಸೆಪ್ಟೆಂಬರ್ 2020, 6:30 IST
ಸಂಜನಾ ಗಲ್ರಾನಿ
ಸಂಜನಾ ಗಲ್ರಾನಿ   
""

ಬೆಂಗಳೂರು:ಡ್ರಗ್ಸ್ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧಿತರಾಗಿರುವ ಸಂಜನಾ ಗಲ್ರಾನಿ ಅಲಿಯಾಸ್ ಅರ್ಚನಾ, 2018ರಲ್ಲೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಈ ಮತಾಂತರ ಖಚಿತಪಡಿಸಿ ಟ್ಯಾನರಿ ರಸ್ತೆಯ 'ದಾರುಲ್ ಉಲೂಮ್ ಶಾಹ್ ವಲಿಉಲ್ಲಾ' ಹೊರಡಿಸಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಂಜನಾ ಅವರ ನೈಜ ಹೆಸರು ಅರ್ಚನಾ. ತಂದೆ ಹೆಸರು ಮನೋಹರ್. ವೈದ್ಯರಾಗಿರುವ ಇಸ್ಲಾಂ ಧರ್ಮದ ಯುವಕರೊಬ್ಬರ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿರುವ ಅರ್ಚನಾ, ಅದಕ್ಕೂ ಮುನ್ನವೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎನ್ನಲಾಗಿದೆ.

ADVERTISEMENT
ಇಸ್ಲಾಂಗೆ ಮತಾಂತರಗೊಂಡ ಬಳಿಕ ಸಂಜನಾಗೆ ನೀಡಲಾದ ಪತ್ರ

'ಹೆಬ್ಬಾಳ ಭುವನೇಶ್ವರಿ ನಗರದ ಅರ್ಚನಾ ಮನೋಹರ್ ಗಲ್ರಾನಿ ಅವರು, ಯಾವ ಒತ್ತಡಕ್ಕೂ ಒಳಗಾಗದೇ ಸ್ವಯಂಪ್ರೇರಿತರಾಗಿ ಇಸ್ಲಾಂ ಧರ್ಮಕ್ಕೆ ಸೇರಿದ್ದಾರೆ. ಅವರ ಹೊಸ ಹೆಸರು ಮಹೀರಾ ಆಗಿದೆ' ಎಂದು ಪತ್ರದಲ್ಲಿ ತಿಳಿಸಲಾಗಿದೆ.

2018ರ ಅಕ್ಟೋಬರ್ 9ರಂದು ಈ ಪತ್ರವನ್ನು ಸಂಜನಾ ಅವರಿಗೆ ನೀಡಲಾಗಿದೆ. ಈ ಸಂಬಂಧ ನ್ಯಾಯಾಲಯಕ್ಕೂ ಸಂಜನಾ ಅಫಿಡ್‌ವಿಟ್ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.