ADVERTISEMENT

ಸಿನಿ ಸುದ್ದಿ: ‘ರವಿಕೆ ಪ್ರಸಂಗ’ಕ್ಕೆ ಡಾಲಿ ಧನಂಜಯ ಸಾಥ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 20:57 IST
Last Updated 21 ಜನವರಿ 2024, 20:57 IST
ಗೀತಾ ಭಟ್‌
ಗೀತಾ ಭಟ್‌   

‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ಗೀತಾ ಭಟ್‌ ಮುಖ್ಯಭೂಮಿಕೆಯಲ್ಲಿರುವ ‘ರವಿಕೆ ಪ್ರಸಂಗ’ ಚಿತ್ರಕ್ಕೆ ನಟ ಡಾಲಿ ಧನಂಜಯ ಸಾಥ್‌ ನೀಡಿದ್ದಾರೆ. ಅವರು ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. 

‘ರವಿಕೆಯನ್ನೇ ಪ್ರಮುಖ ಕಥೆಯಾಗಿಸಿಕೊಂಡಿರುವ ಹಾಸ್ಯಭರಿತ ಚಿತ್ರವಿದು. ಕುಟುಂಬ ಕುಳಿತು ನೋಡಬಹುದಾಗಿದ್ದು, ಜೊತೆಗೊಂದು ಸಂದೇಶವೂ ಇದೆ. ಫೆಬ್ರುವರಿ 16 ರಂದು ಚಿತ್ರ ತೆರೆಕಾಣಲಿದೆ’ ಎಂದರು ನಿರ್ದೇಶಕ ಸಂತೋಷ್ ಕೊಡೆಂಕೇರಿ.

‘ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣುಮಕ್ಕಳಿಗೆ ಬಹಳ ಇಷ್ಟ. ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ ಬ್ಲೌಸ್ ಇರಬೇಕು. ಸಾವಿರಾರೂ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರಿಪೂರ್ಣವಾಗಿ ಇರುವುದಿಲ್ಲ. ರವಿಕೆ ರಗಳೆಯ ಕಾಮಿಡಿ ಕಥೆಯಿದು’ ಎಂದರು ನಾಯಕಿ ಗೀತಾ ಭಟ್‌. 

ADVERTISEMENT

ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲೂ ಚಿತ್ರೀಕರಣ ನಡೆದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.