ADVERTISEMENT

ಬಾಲಿವುಡ್‌ ನಿರ್ದೇಶಕನ ಕನ್ನಡ ಸಿನಿಮಾ ‘ರೋಡ್ ಕಿಂಗ್’ ತೆರೆಗೆ ಬರಲು ರೆಡಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 10:16 IST
Last Updated 17 ಜುಲೈ 2022, 10:16 IST
ಮತೀನ್‌ ಹುಸೇನ್‌
ಮತೀನ್‌ ಹುಸೇನ್‌   

‘ರೋಡ್‌ ಕಿಂಗ್‌’ ತೆರೆಗೆ ಬರಲು ಸಜ್ಜಾಗಿದೆ. ಮತೀನ್‌ ಹುಸೇನ್‌ ಎಂಬ ಬಾಲಿವುಡ್‌ ನಿರ್ದೇಶಕ ಕನ್ನಡದಲ್ಲಿ ಮಾಡಿದ ಮೊದಲ ಪ್ರಯೋಗವಿದು. ಚಿತ್ರದಲ್ಲಿ ಅವರೇ ನಾಯಕ.ರುಕ್ಷರ್ ದಿಲ್ಹಾನ್ ನಾಯಕಿ.

ಚಿತ್ರಕ್ಕೆ ಹಾಲಿವುಡ್‌ ನಿರ್ದೇಶಕ ರಾಂಡಿ ಕೆಂಟ್‌ ಕೂಡಾ ನಿರ್ದೇಶನ ನೀಡಿದ್ದಾರೆ. ಲಾಸ್‌ ಏಂಜಲೀಸ್‌ನಲ್ಲೇ ಕುಳಿತು. ಸ್ಕೈಪ್‌ ವಿಡಿಯೋ ಮೂಲಕ ಇಡೀ ಚಿತ್ರದ ಚಿತ್ರೀಕರಣದ ನಿರ್ದೇಶನ ನೀಡಿದ್ದಾರೆ.

ಲವ್ ಬ್ರೇಕಪ್‌ನಿಂದ ಎಕ್ಸ್ ಸಿಂಡ್ರೋಮ್‌ಗೆ ತುತ್ತಾದ ಯುವಪ್ರೇಮಿಗಳ ಸುತ್ತ ಹೆಣೆದಿರುವ ಕಥೆಯಿದು. ರೊಮ್ಯಾಂಟಿಕ್, ಥ್ರಿಲ್ಲರ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಈಗಾಗಲೇ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕದಾದ್ಯಂತ ತೆರೆ ಕಾಣುತ್ತಿದೆ.

ADVERTISEMENT

ಜನಪ್ರಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ, ಹಾಡಿರುವ ‘ಕೊಡು ನನಗೆ’ ಎಂಬ ಹಾಡು ಕೂಡ ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಅರೀಫ್ ಲಲಾನಿ ಈ ಚಿತ್ರದ ಛಾಯಾಗ್ರಾಹಕರು.

ಸ್ಕಾಟ್ ವಾಲ್ಫ್ ಅವರ ಸೌಂಡ್ ಡಿಸೈನ್ ‘ರೋಡ್ ಕಿಂಗ್’ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.