ADVERTISEMENT

ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ಸರ್ವಂ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 16:41 IST
Last Updated 17 ಮಾರ್ಚ್ 2021, 16:41 IST
‘ಸರ್ವಂ’ ಚಿತ್ರದಲ್ಲಿ ರಾಜ್ ಪ್ರಭು‌, ಅಕ್ಷಿತಾ ನಾಗರಾಜ್‌
‘ಸರ್ವಂ’ ಚಿತ್ರದಲ್ಲಿ ರಾಜ್ ಪ್ರಭು‌, ಅಕ್ಷಿತಾ ನಾಗರಾಜ್‌   

ಕೃಷ್ಣ ಕಂಬೈನ್ಸ್ ಹಾಗೂ ಉದಯ ಆರ್ಟ್ಸ್ ಲಾಂಛನದಲ್ಲಿ ಸುರೇಶ್ ಕಣ್ಣ ಹಾಗೂ ಕೆ.ಎಂ.ಕೃಷ್ಣ ದೊಡ್ಡಿ ನಿರ್ಮಿಸುತ್ತಿರುವ ‘ಸರ್ವಂ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡು, ಒಂದು ಸಾಹಸ ‌ಸನ್ನಿವೇಶ ಹಾಗೂ ಮಾತಿನ‌ ಭಾಗದ ಚಿತ್ರೀಕರಣ ಮೊದಲ ಹಂತದಲ್ಲಿ ನಡೆದಿದೆ.‌ ಅಫ್ಜಲ್ (ನಮ್ಮ ಸೂಪರ್ ಸ್ಟಾರ್) ಅವರು ಈ ಚಿತ್ರದ ಸಹ ನಿರ್ಮಾಪಕರು.

ಚಿತ್ರೀಕರಣಕ್ಕಾಗಿ‌ ಬೆಂಗಳೂರಿನ‌ ಜಿಗಣಿ ಬಳಿ ಅದ್ದೂರಿ ಸೆಟ್ ಹಾಕಲಾಗಿತ್ತು.‌ ಎರಡನೇ ಹಂತದ ಚಿತ್ರೀಕರಣ ಪಾಂಡಿಚೇರಿ, ಮಂಗಳೂರು, ಗೋವಾದಲ್ಲಿ ‌ನಡೆಯಲಿದೆ. ಮುಂದಿನವಾರದಿಂದ ಚಿತ್ರೀಕರಣ ಆರಂಭವಾಗಲಿದೆ.‌ ಒಟ್ಟು ನಾಲ್ಕು ಹಂತದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.

ಕಲಾವಿದನಾಗಿ ‘ಅನಕ್ಷ’, ‘ಮೋಂಬತ್ತಿ’, ‘ತಮಸ್’ ಹಾಗೂ ‘ಛಾಯಾ’ ಚಿತ್ರಗಳಲ್ಲಿ ಅಭಿನಯಿಸಿರುವ ರಾಜ್ ಪ್ರಭು‌ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.‌‌‌ ಸಾಕಷ್ಟು ಜಾಹೀರಾತುಗಳನ್ನು ನಿರ್ದೇಶಿಸಿರುವ ರಾಜ್ ಪ್ರಭು ಅವರಿಗೆ ಹಿರಿತೆರೆಯಲ್ಲಿ ಇದು ಮೊದಲ ನಿರ್ದೇಶನದ ಚಿತ್ರ.

ADVERTISEMENT

ನಿರ್ದೇಶಕರೇ ‘ಸರ್ವಂ’ ಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಜರತ್ನ ಬರೆಯುವುದರ ಜೊತೆಗೆ ಸಹ ನಿರ್ದೇಶನವನ್ನು ಮಾಡಿದ್ದಾರೆ. ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ನೀಡುತ್ತಿದ್ದಾರೆ. ಶ್ಯಾಂ ಸಿಂಧನೂರು ಛಾಯಾಗ್ರಹಣ, ಕೆ.ಬಿ.ಕೆ ಫಯಾಜ್ ಖಾನ್ ಸಾಹಸ ನಿರ್ದೇಶನ ಹಾಗೂ ಜಗ್ಗು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ರಾಜ್ ಪ್ರಭು ಅವರಿಗೆ ನಾಯಕಿಯಾಗಿ‌ ಅಕ್ಷಿತಾ ನಾಗರಾಜ್ ನಟಿಸಿದ್ದಾರೆ. ಧಾರಾ ಪರೇಕ್, ಅಫ್ಜಲ್, ರವಿ, ಕನ್ನಡ ರಾಜು, ಸ್ಮೈಲ್ ಶಿವು ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.