ADVERTISEMENT

ವಿಜಯ ರಾಘವೇಂದ್ರ ನಟನೆಯ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ಗೆ ಪವನ್ ಒಡೆಯರ್‌ ಸಾಥ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 23:30 IST
Last Updated 26 ಜನವರಿ 2026, 23:30 IST
<div class="paragraphs"><p>ವಿಜಯ ರಾಘವೇಂದ್ರ&nbsp;</p></div>

ವಿಜಯ ರಾಘವೇಂದ್ರ 

   

ವಿಜಯ ರಾಘವೇಂದ್ರ ನಟನೆಯ ಹೊಸ ಸಿನಿಮಾ ‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’ ಅನ್ನು ನಿರ್ದೇಶಕ ಪವನ್‌ ಒಡೆಯರ್‌ ಪ್ರಸ್ತುಪಡಿಸಲಿದ್ದಾರೆ. 

2021ರಲ್ಲಿ ತೆರೆಕಂಡ ವಿಜಯ ರಾಘವೇಂದ್ರ ನಟನೆಯ ‘ಸೀತಾರಾಮ್‌ ಬಿನೋಯ್‌’ ಸಿನಿಮಾದ ಸೀಕ್ವೆಲ್‌ ಇದಾಗಿದೆ. ಇದರಲ್ಲಿ ಪೊಲೀಸ್‌ ಅಧಿಕಾರಿಯಾಗಿ ಮಿಂಚಿದ್ದ ವಿಜಯ ರಾಘವೇಂದ್ರ ಬಳಿಕ ‘ಸೀತಾರಾಮ್‌ ಬಿನೋಯ್‌’ನಲ್ಲಿ ನಟಿಸಿದ್ದರು. ಇದನ್ನು ದೇವಿಪ್ರಸಾದ್‌ ಶೆಟ್ಟಿ ಅವರೇ ನಿರ್ದೇಶಿಸಿದ್ದರು. ಇದೀಗ ಮತ್ತೊಮ್ಮೆ ದೇವಿ ಪ್ರಸಾದ್‌ ಶೆಟ್ಟಿ ಜೊತೆ ಸಿನಿಮಾ ಮಾಡಿರುವ ವಿಜಯ್‌, ಪೊಲೀಸ್‌ ಅಧಿಕಾರಿಯಾಗಿ ಮತ್ತೊಂದು ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ದೇವಿಪ್ರಸಾದ್‌ ಅವರೇ ಈ ಸಿನಿಮಾದ ಕಥೆ ಬರೆದಿದ್ದು, ಸಾತ್ವಿಕ್‌ ಹೆಬ್ಬಾರ್‌ ಜೊತೆ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ. ಅರವಿಂದ್‌ ಶೆಟ್ಟಿ ಸಹ ನಿರ್ಮಾಪಕರಾಗಿದ್ದಾರೆ.

ADVERTISEMENT

ಸೀಕ್ವೆಲ್‌ ಸಿನಿಮಾ ನೋಡಿ ಇಷ್ಟಪಟ್ಟಿರುವ ಪವನ್‌, ಈ ಸಿನಿಮಾ ಪ್ರೇಕ್ಷಕರಿಗೆ ಥ್ರಿಲ್‌ ನೀಡಲಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾಗೆ ಹೇಮಂತ್ ಆಚಾರ್ ಛಾಯಾಚಿತ್ರಗ್ರಹಣ, ನವನೀತ್ ಶ್ಯಾಮ್ ಸಂಗೀತ ನಿರ್ದೇಶನ, ಶಶಾಂಕ್ ನಾರಾಯಣ್ ಸಂಕಲನ, ಭವಾನಿ ಶಂಕರ್‌ ಕಲಾ ನಿರ್ದೇಶನವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.