ADVERTISEMENT

ಚಂದನವನದ ಹಿರಿಯ ನಟಿ ಸುರೇಖಾ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 8:19 IST
Last Updated 6 ಜೂನ್ 2021, 8:19 IST
ಸುರೇಖಾ
ಸುರೇಖಾ   

ಬೆಂಗಳೂರು: ಚಂದನವನದ ಹಿರಿಯ ನಟಿ ಸುರೇಖಾ (69) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಡಾ.ರಾಜ್‌ಕುಮಾರ್‌ ಸೇರಿದಂತೆ ಹಲವು ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ಅವರು 150ಕ್ಕೂ ಹೆಚ್ಚು ಚಿತ್ರಗಳ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

‘ಆಪರೇಷನ್ ಜಾಕ್‌ಪಾಟ್’, ‘ತ್ರಿಮೂರ್ತಿ’, ‘ಒಲವು ಗೆಲುವು’, ‘ಗಿರಿ ಕನ್ಯೆ’, ‘ಸಾಕ್ಷಾತ್ಕಾರ’, ‘ಕಸ್ತೂರಿ ನಿವಾಸ’, ‘ಹುಲಿಯ ಹಾಲಿನ ಮೇವು’, ‘ಶಿವಕನ್ಯೆ’, ‘ಕಾವೇರಿ’, ‘ಕೆಸರಿನ ಕಮಲ’, ‘ಬ್ಯಾಂಕರ್ ಮಾರ್ಗಯ್ಯ’, ‘ಆಲೆಮನೆ’, ‘ನಾಗರಹೊಳೆ’, ‘ತಾಯಿ ದೇವರು’, ‘ಭಕ್ತ ಸಿರಿಯಾಳ’ ಮೊದಲಾದವು ಅವರು ಅಭಿನಯಿಸಿದ ಪ್ರಮುಖ ಚಿತ್ರಗಳು. ‘ಮಾಯಾ ಮನುಷ್ಯ’ ಮತ್ತು ‘ನಾನು ಬಾಳಬೇಕು’, ‘ನಾನು ಅವನಿಲ್ಲೈ’ ಅವರು ನಾಯಕಿಯಾಗಿ ಅಭಿನಯಿಸಿದ ಚಿತ್ರಗಳು.

ADVERTISEMENT

ಮೂಲತಃ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯಗಾರ್ತಿ ಆಗಿದ್ದ ಸುರೇಖಾ. ಈ ಮೂಲಕವೇ ಚಿತ್ರರಂಗ ಪ್ರವೇಶಿಸಿದರು. ಲಂಡನ್, ಪ್ಯಾರಿಸ್, ಮಾಸ್ಕೋ, ತಾಷ್ಕೆಂಟ್‌ಗಳಲ್ಲಿಯೂ ಅವರು ನೃತ್ಯ ಪ್ರದರ್ಶನ ನೀಡಿದ್ದರು.

ಈ ವರ್ಷ ಫೆಬ್ರುವರಿಯಲ್ಲಿ ಅವರು ಎಸ್‌.ಪಿ.ವರದರಾಜ್‌ ಪ್ರಶಸ್ತಿಗೆ ಪಾತ್ರರಾಗಿದ್ದರು. ಸೆನ್ಸಾರ್‌ ಮಂಡಳಿ, ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿಯ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.