ADVERTISEMENT

ಬಾಲಿವುಡ್ ಹಿರಿಯ ನಟಿ ನಿಮ್ಮಿ ನಿಧನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 16:08 IST
Last Updated 26 ಮಾರ್ಚ್ 2020, 16:08 IST
ನಿಮ್ಮಿ
ನಿಮ್ಮಿ   

ಮುಂಬೈ:ಹಿರಿಯ ನಟಿ ನಿಮ್ಮಿ (88) ಅಲ್ಪಕಾಲದ ಅನಾರೋಗ್ಯದಿಂದಾಗಿ ಬುಧವಾರ ಮುಂಬೈನಲ್ಲಿ ನಿಧನರಾದರು. ಖ್ಯಾತ ನಟರಾದ ದೇವ್ ಆನಂದ್, ರಾಜ್ ಕಪೂರ್, ದಿಲೀಪ್ ಕುಮಾರ್ ಅವರ ಚಿತ್ರಗಳಲ್ಲಿ ನಿಮ್ಮಿ ನಟಿಸಿದ್ದರು. ತಮ್ಮ ಕಾಲದ ನಾಯಕಿಯರಾದ ಮಧುಬಾಲಾ, ನರ್ಗಿಸ್, ಸುರೈಯಾ, ಮೀನಾ ಕುಮಾರಿ ಹಾಗೂ ಗೀತಾ ಬಾಲಿ ಅವರೊಂದಿಗೂ ಅಭಿನಯಿಸಿದ್ದರು.

ಬರ್ಸಾತ್ (1949), ದೀದಾರ್(1951), ದಾಗ್ (1952), ಆನ್ (1952), ಅಮರ್ (1954), ಕುಂದನ್ (1955), ಬಸಂತ್ ಬಹಾರ್ (1956) ಅವರ ನಟನೆಯ ಕೆಲವು ಚಿತ್ರಗಳು.

ಬರ್ಸಾತ್ ಚಿತ್ರ ಆರಂಭಕ್ಕೂ ಮೊದಲು ರಾಜ್ ಕಪೂರ್ ಅವರು, ನವಾಬ್ ಬನೂ ಎನ್ನುವ ಮೂಲ ಹೆಸರನ್ನು ಚಿತ್ರಕ್ಕಾಗಿ ನಿಮ್ಮಿ ಎಂದು ಬದಲಿಸಿದ್ದರು.

ADVERTISEMENT

ನಿಮ್ಮಿ ಅವರ ನಿಧನಕ್ಕೆ, ದಿಲೀಪ್ ಕುಮಾರ್ ಪತ್ನಿ ಸಾಯಿರಾ ಬಾನು, ನಟ ರಿಷಿ ಕಪೂರ್, ಚಿತ್ರ ನಿರ್ದೇಶಕ ಮಹೇಶ್ ಭಟ್ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.