ADVERTISEMENT

‘ಶಾರುಖ್ ಕಿರ್ಪಾನ್‌ ಹಿಡಿದಿಲ್ಲ’

ಪಿಟಿಐ
Published 30 ನವೆಂಬರ್ 2018, 19:18 IST
Last Updated 30 ನವೆಂಬರ್ 2018, 19:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ಜೀರೊ’ ಚಿತ್ರದ ಪೋಸ್ಟರ್‌ನಲ್ಲಿ ಶಾರುಖ್‌ಖಡ್ಗವನ್ನು ಹಿಡಿದಿದ್ದಾರೆಯೇ ಹೊರತು ‘ಕಿರ್ಪಾನ್‌‘ (ಸಿಖ್‌ ಸಮುದಾಯದವರು ಬಳಸುವ ಸಣ್ಣ ಕತ್ತಿ) ಅಲ್ಲ ಎಂದು ಸಿನಿಮಾ ತಯಾರಕರುಹೈಕೋರ್ಟ್‌ಗೆ ತಿಳಿಸಿದ್ದಾರೆ.

ಈ ಚಿತ್ರದ ಟ್ರೇಲರ್‌ ಮತ್ತು ಪೋಸ್ಟರ್‌ ಸಿಖ್‌ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಹಾಗಾಗಿ ಈ ದೃಶ್ಯಕ್ಕೆ ಕತ್ತರಿ ಹಾಕಬೇಕೆಂದು ವಕೀಲ ಅಮೃತ್‌ಪಾಲ್‌ ಸಿಂಗ್‌ ಖೋಸ್ಲಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

‘ಅರ್ಜಿದಾರರು ತಪ್ಪು ಊಹೆ ಮಾಡಿಕೊಂಡಿದ್ದಾರೆ. ಶಾರುಖ್‌ ಕಿರ್ಪಾನ್‌ ಹಿಡಿದಿಲ್ಲ. ಅದು ಸಾಮಾನ್ಯ ಖಡ್ಗವಷ್ಟೇ’ ಎಂದು ನಟ ಶಾರುಖ್‌ ಖಾನ್‌,ನಿರ್ಮಾಪಕರಾದ ಗೌರಿ ಖಾನ್ ಮತ್ತು ಕರುಣಾ ಬದ್ವಾಲ್‌, ನಿರ್ದೇಶಕ ಆನಂದ್‌ ಎಲ್‌. ರಾಯ್‌ ಕೋರ್ಟ್‌ಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.