ADVERTISEMENT

‘ಮನ್ನತ್‌’ ಬಿಟ್ಟು ಬೇರೆಡೆಗೆ ಶಾರುಕ್‌ ಕುಟುಂಬ ಸ್ಥಳಾಂತರ: ಕಾರಣವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2025, 9:34 IST
Last Updated 26 ಫೆಬ್ರುವರಿ 2025, 9:34 IST
<div class="paragraphs"><p>‘ಮನ್ನತ್’ ಹೊರಗೆ ನಿಂತು ಅಭಿಮಾನಿಗಳತ್ತ ಕೈಬೀಸುತ್ತಿರುವ ಶಾರುಕ್ ಖಾನ್</p></div>

‘ಮನ್ನತ್’ ಹೊರಗೆ ನಿಂತು ಅಭಿಮಾನಿಗಳತ್ತ ಕೈಬೀಸುತ್ತಿರುವ ಶಾರುಕ್ ಖಾನ್

   

ಚಿತ್ರ: Instagram/@amit_dey_photography

ADVERTISEMENT

ಮುಂಬೈ: ಬಾಲಿವುಡ್ ನಟ ಶಾರುಕ್ ಖಾನ್ ಅವರು ತಮ್ಮ ಪತ್ನಿ, ಮಕ್ಕಳೊಂದಿಗೆ ಪ್ರೀತಿಯ ಮನೆ ‘ಮನ್ನತ್‌’ ಅನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರವಾಗಲಿದ್ದಾರೆ ಎಂದು ವರದಿಯಾಗಿದೆ.

ಎರಡು ದಶಕದಿಂದ ವಾಸಿಸುತ್ತಿರುವ ಪ್ರೀತಿಯ ಮನೆಯನ್ನು ಶಾರುಕ್‌ ತೊರೆದು ಹೋಗುತ್ತಿರುವುದೆನೋ ನಿಜ ಆದರೆ, ಅದು ತಾತ್ಕಾಲಿಕವಷ್ಟೆ.

ಭವ್ಯ ಬಂಗಲೆ ‘ಮನ್ನತ್‌’ನಲ್ಲಿ ನವೀಕರಣ ಕೆಲಸಗಳು ಪ್ರಾರಂಭವಾಗಿರುವುದರಿಂದ ಮತ್ತು ಬಂಗಲೆಯನ್ನು ವಿಸ್ತರಣೆ ಮಾಡುವ ಯೋಜನೆಯಿರುವುದರಿಂದ ಎರಡು ವರ್ಷಗಳ ಕಾಲ ಶಾರುಕ್ ಕುಟುಂಬ ಬೇರೆ ಕಡೆ ವಾಸಿಸಲಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಸದ್ಯ ಶಾರುಕ್‌ ಅವರು ಮುಂಬೈನ ಪಾಲಿ ಹಿಲ್‌ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ವೊಂದನ್ನು ವರ್ಷಕ್ಕೆ ₹2.9 ಕೋಟಿಗೆ ಬಾಡಿಗೆಗೆ ಪಡೆದುಕೊಂಡಿದ್ದಾರೆ. ಮನ್ನತ್‌ನ ನವೀಕರಣ ಕೆಲಸಗಳು ಇದೇ ಮೇ ತಿಂಗಳಿನಲ್ಲಿ ಆರಂಭವಾಗಲಿದೆ.

ಸಮುದ್ರಕ್ಕೆ ಅಭಿಮುಖವಾಗಿ ನಿರ್ಮಿಸಿರುವ ಭವ್ಯ ಬಂಗಲೆ ಮನ್ನತ್‌ ನಲ್ಲಿ ಶಾರುಕ್ ಕುಟುಂಬವು 2005ರಿಂದ ವಾಸಿಸುತ್ತಿದೆ. ಶಾರುಕ್ ಹಾಗೂ ಅವರ ಅಭಿಮಾನಿಗಳಿಗೆ ಈ ಬಂಗಲೆ ಒಂದು ರೀತಿಯ ಭಾವನಾತ್ಮಕ ಸಂಬಂಧವನ್ನು ಕಟ್ಟಿಕೊಟ್ಟಿದೆ. ಶಾರುಕ್ ಹುಟ್ಟುಹಬ್ಬದ ದಿನ ಈ ಬಂಗಲೆಯ ಎದುರುಗಡೆ ಜಮಾಯಿಸುವ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.