ADVERTISEMENT

Kannada Movies: ಹೊರಬಂತು ‘ಗಂಗೆ ಗೌರಿ’ ಟ್ರೇಲರ್

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 0:30 IST
Last Updated 27 ಆಗಸ್ಟ್ 2025, 0:30 IST
ನಿಖಿತಾ ಸ್ವಾಮಿ
ನಿಖಿತಾ ಸ್ವಾಮಿ   

ಶಿವ ಪುರಾಣದ ಕಥೆಯನ್ನು ಹೊಂದಿರುವ ‘ಗಂಗೆ ಗೌರಿ’ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡಿವೆ. ಹಿರಿಯ ನಟ ಗಣೇಶ್‌ರಾವ್ ಕೇಸರ್‌ಕರ್ ಶಿವನಾಗಿ ಕಾಣಿಸಿಕೊಂಡಿದ್ದು, ಇದು ಅವರ 350ನೇ ಚಿತ್ರ. ಬಿ.ಎ.ಪುರುಷೋತ್ತಮ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. 

‘ಶಿವ ಪುರಾಣದಲ್ಲಿ ಗಂಗೆ ಮತ್ತು ಗೌರಿಯ ಸಂಬಂಧವೇನು? ಗಂಗೆ ಯಾಕೆ ಶಿವನ ತಲೆ ಮೇಲೆ ಇರುತ್ತಾಳೆ? ಗೌರಿ ಯಾಕೆ ಶಿವನ ತೊಡೆ ಮೇಲೆ ಕೂತಿರುತ್ತಾಳೆ? ಇದಕ್ಕೆ ಕಾರಣವೇನು? ಇಬ್ಬರನ್ನು ಶಿವನು ಯಾವ ರೀತಿ ಸಂಭಾಳಿಸುತ್ತಾನೆ ಎಂಬುದೇ ಚಿತ್ರಕಥೆ. ಜಗತ್ತಿನ ರಕ್ಷಕನಾದ ಪರಮೇಶ್ವರನಿಗೂ ವಿಧಿಯ ಕಾಟ ತಪ್ಪಿಲ್ಲ. ಶನಿದೇವನಿಂದ ಮೂವರು ಕಷ್ಟ ಅನುಭವಿಸುತ್ತಾರೆ. ಈ ಎಲ್ಲ ಅಂಶಗಳನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ’ ಎಂದರು ನಿರ್ದೇಶಕರು. 

ಜಿ.ಆರ್.ಫಿಲ್ಮ್ಸ್‌ ಅಡಿಯಲ್ಲಿ ಕೇಸರ್‌ಕರ್ ಅವರೇ ಬಂಡವಾಳ ಹೂಡುತ್ತಿದ್ದಾರೆ. ರೂಪಾಲಿ ಗೌರಿ, ಪಾರ್ವತಿ, ದಾಕ್ಷಾಯಿಣಿ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಂಗೆಯಾಗಿ ನಿಖಿತಾಸ್ವಾಮಿ ನಟಿಸಿದ್ದಾರೆ. ಜಯಸಿಂಹ ಮುಸೂರಿ, ಎಸ್ಕಾರ್ಟ್ ಶ್ರೀನಿವಾಸ್, ಜಿಮ್‌ ಶಿವು, ಬಸವರಾಜ ದೇಸಾಯಿ ಮುಂತಾದವರು ಚಿತ್ರದಲ್ಲಿದ್ದಾರೆ.

ADVERTISEMENT

ರಾಜ್‌ಭಾಸ್ಕರ್ ಸಂಗೀತ, ಗೌರಿವೆಂಕಟೇಶ್ ಛಾಯಾಚಿತ್ರಗ್ರಹಣ, ಅನಿಲ್‌ ಸಂಕಲನವಿದೆ. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು  ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ತೆರೆಗೆ ಬರಲಿದೆ ಎಂದಿದೆ ಚಿತ್ರತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.