ADVERTISEMENT

ಚಿತ್ರೀಕರಣ ಪೂರ್ಣಗೊಳಿಸಿದ 'ನೈಟ್ಮೇರ್'

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 7:52 IST
Last Updated 4 ಆಗಸ್ಟ್ 2020, 7:52 IST
ನೈಟ್ಮೇರ್‌ ಚಿತ್ರದಲ್ಲಿ ಅಂಚಲ್‌ ರಾಜ್‌ ಮತ್ತು ನವೀನ್‌ ನಾಯಕ್‌
ನೈಟ್ಮೇರ್‌ ಚಿತ್ರದಲ್ಲಿ ಅಂಚಲ್‌ ರಾಜ್‌ ಮತ್ತು ನವೀನ್‌ ನಾಯಕ್‌   

ಕಾಮಿಡಿ,ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾಹಂದರದ ‘ನೈಟ್ಮೇರ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಚಿತ್ರತಂಡ ಕೈಗೆತ್ತಿಕೊಂಡಿದೆ.

ನವೀನ್ ನಾಯಕ ಮತ್ತು ಕಿತ್ತಾನೆ ಗೋಪಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.ನವೀನ್ ನಾಯಕ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಇವರಿಗೆ ಜೋಡಿಯಾಗಿಅಂಚಲ್ ರಾಜ್ ಅಭಿನಯಿಸಿದ್ದಾರೆ.

ಕಂಟೆಂಟ್‌ ಪ್ರಧಾನವಾದ ಚಿತ್ರಗಳನ್ನು ಕನ್ನಡ ಸಿನಿಪ್ರಿಯರು ಎಂದಿಗೂ ಕೈಬಿಡುವುದಿಲ್ಲ. ಈ ಚಿತ್ರದಲ್ಲಿ ಒಳ್ಳೆಯ ಕಂಟೆಂಟ್‌ ಇದೆ. ಹಾಸ್ಯವೂ ಹದವಾಗಿ ಬೆರೆಸಲಾಗಿದೆ. ಪ್ರೇಕ್ಷಕನ ಕುತೂಹಲ ಕೆರಳಿಸುವಂತಹ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಅಂಶಗಳನ್ನೂ ಕಥೆಗೆ ಪೂರಕವಾಗಿ ಸೇರಿಸಿದ್ದೇವೆ. ನಮ್ಮ ಚಿತ್ರ ಸಿನಿಪ್ರಿಯರ ಮನಸು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ಮತ್ತು ನಾಯಕ ನಟನವೀನ್ ನಾಯಕ.

ADVERTISEMENT

ಬೆಂಗಳೂರು ಸುತ್ತಮುತ್ತಕಳೆದ ಜನವರಿಯಿಂದಲೇ ಶೂಟಿಂಗ್‌ ನಡೆಸಲಾಗಿತ್ತು. ಕೊರೊನಾ ಲಾಕ್‌ಡೌನ್‌ ಪೂರ್ವದಲ್ಲೇ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದಿತ್ತು. ಬಾಕಿ ಉಳಿದಿದ್ದ ಸಣ್ಣಪುಟ್ಟ ಭಾಗವನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಲಾಯಿತು ಎನ್ನುತ್ತಾರೆ ಅವರು.

ಸೌನವಿ ಕ್ರಿಯೇಷನ್ಸ್ ಅಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆಕೆ.ಆರ್. ಸೌಜನ್ಯ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಹರಿಕೃಷ್ಣ,ನಿರ್ದೇಶನ ಸುಬ್ರಮಣ್ಯ ಆಚಾರ್ಯ, ಸಂಕಲನ ಪವನ್ ಗೌಡ ಅವರದು.

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಅಪ್ಪಣ್ಣ ರಾಮದುರ್ಗ, ‘ಕಿರಿಕ್ ಪಾರ್ಟಿ’ ಖ್ಯಾತಿಯ ರಾಘು ರಾಮನ ಕೊಪ್ಪ, ಯಶೋಧರ, ಚೇತನ್, ಮಹೇಶ್, ಅಕ್ಷಯ್ ಅವರ ತಾರಾಗಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.