ADVERTISEMENT

Bollywood | ರಾಹುಲ್‌ ಮೋದಿ ಜೊತೆ ಶ್ರದ್ಧಾ ಕಪೂರ್‌ ಸಿನಿಮಾ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 21:40 IST
Last Updated 24 ನವೆಂಬರ್ 2025, 21:40 IST
<div class="paragraphs"><p>ಶ್ರದ್ಧಾ ಕಪೂರ್‌&nbsp;</p></div>

ಶ್ರದ್ಧಾ ಕಪೂರ್‌ 

   

‘ಆಶಿಕಿ–2’, ‘ಏಕ್‌ ವಿಲನ್‌’, ‘ಸ್ತ್ರೀ’ ಖ್ಯಾತಿಯ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌, ರಾಹುಲ್‌ ಮೋದಿ ನಿರ್ದೇಶಿಸಲಿರುವ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ನವೋದ್ಯಮಗಳ ಕುರಿತಾದ ಕಥೆಯನ್ನು ಈ ಸಿನಿಮಾ ಹೊಂದಿರಲಿದೆ ಎಂದಿದ್ದಾರೆ ಶ್ರದ್ಧಾ. 

‘ಪ್ಯಾರ್‌ ಕ ಪಂಚನಾಮ’ ಹಾಗೂ ‘ಪ್ಯಾರ್‌ ಕ ಪಂಚನಾಮ–2’ ಸಿನಿಮಾಗಳಿಂದ ಗುರುತಿಸಿಕೊಂಡಿರುವ ರಾಹುಲ್‌ ಮೋದಿ ಸಹಾಯಕ ನಿರ್ದೇಶಕ ಹಾಗೂ ಬರಹಗಾರರಾಗಿ ಕೆಲಸ ಮಾಡಿದ್ದಾರೆ.  

ADVERTISEMENT

ಹೊಸ ಪ್ರಾಜೆಕ್ಟ್‌ ಕುರಿತು ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ಶ್ರದ್ಧಾ, ಶೀಘ್ರದಲ್ಲೇ ಈ ಸಿನಿಮಾದ ಕುರಿತು ಅಧಿಕೃತ ಘೋಷಣೆಯಾಗಲಿದೆ ಎಂದಿದ್ದಾರೆ. ‘ಈಗಾಗಲೇ ಒಂದು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಇದು ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಈ ಸಿನಿಮಾ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಇದರ ಜೊತೆಗೆ ರಾಹುಲ್‌ ಮೋದಿ ಅವರು ನಿರ್ದೇಶಿಸುತ್ತಿರುವ ಸಿನಿಮಾ ಒಪ್ಪಿಕೊಂಡಿದ್ದೇನೆ. ಈ ಚಿತ್ರದಲ್ಲಿನ ಪಾತ್ರವು ಸವಾಲಿನಿಂದ ಕೂಡಿದ್ದು, ಹಿಂದಿನ ಸಿನಿಮಾಗಳಿಗಿಂತ ಭಿನ್ನವಾದ ಒಂದು ಪಾತ್ರ ಇದರಲ್ಲಿದೆ. ನಾನು ಸದಾ ಸವಾಲುಗಳುಳ್ಳ ಪಾತ್ರಗಳ ನಿರೀಕ್ಷೆಯಲ್ಲಿರುತ್ತೇನೆ’ ಎಂದಿದ್ದಾರೆ. 

2024ರಲ್ಲಿ ತೆರೆಕಂಡಿದ್ದ ‘ಸ್ತ್ರೀ–2’ ಸಿನಿಮಾದಲ್ಲಿ ಮಿಂಚಿದ್ದ ಶ್ರದ್ಧಾ, ‘ಈಥಾ’ ಎನ್ನುವ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.