ADVERTISEMENT

ಮತ್ತೆ ಶ್ರುತಿ ಮೀಟುತಿದೆ...

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 20:43 IST
Last Updated 23 ಏಪ್ರಿಲ್ 2019, 20:43 IST
ಶ್ರುತಿ ಹಾಸನ್‌
ಶ್ರುತಿ ಹಾಸನ್‌   

ಹೆಚ್ಚು ಕಮ್ಮಿ ನಾಲ್ಕು ವರ್ಷಗಳಿಂದ ಸಂಗೀತವನ್ನೇ ಧೇನಿಸುತ್ತಿರುವ ನಟಿ ಶ್ರುತಿ ಹಾಸನ್ ಮತ್ತೆ ಕ್ಯಾಮೆರಾ ಮುಂದೆ ನಿಂತಿದ್ದಾರೆ. ನಟನೆಗೆ ಮರಳುವ ಬಗ್ಗೆ ಈ ಹಿಂದೆ ಹೇಳಿದ್ದಂತೆ ಶ್ರುತಿ ತಮಿಳಿನ ‘ಮಕ್ಕಳ್‌ ಸೆಲ್ವನ್‌’ ವಿಜಯ್ ಸೇತುಪತಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಎಸ್.ಪಿ. ಜಗನ್ನಾಥನ್‌ ನಿರ್ದೇಶನದ ಹೊಸ ಚಿತ್ರದ ಮುಹುರ್ತವೂ ಮುಗಿದಿದೆ.

ಶ್ರುತಿ, ಅಜಿತ್‌ ಜೊತೆಗೆ ‘ವೇದಾಲಂ’ನಲ್ಲಿ ನಟಿಸಿದ್ದು 2015ರಲ್ಲಿ. ಅದಾದ ಬಳಿಕ ಹೆಸರಾಂತ ನಿರ್ದೇಶಕರು ಕಾಲ್‌ಶೀಟ್‌ ಕೇಳಿದರೂ ಅವರು ನಿರಾಕರಿಸಿದ್ದರು. ಇದಕ್ಕೆ ಕಾರಣ ಅವರ ಸಂಗೀತಪ್ರೇಮ.

ADVERTISEMENT

ಇದೀಗ, ‘ಲಾಭಂ’ ಚಿತ್ರದ ಮೂಲಕ ಶ್ರುತಿ ಎರಡನೇ ಇನ್ನಿಂಗ್ಸ್‌ ಶುರು ಮಾಡಲಿದ್ದಾರೆ. ವಿಜಯ್ ಅವರದೇ ನಿರ್ಮಾಣದ ಚಿತ್ರ ಇದಾಗಿದ್ದು, ಕಲೈಯರಸನ್‌ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

2000ನೇ ಇಸವಿಯಲ್ಲಿ ‘ಹೇ ರಾಮ್‌’ ಚಿತ್ರದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ಶ್ರುತಿ. ಆ ಚಿತ್ರದಲ್ಲಿ ವಲ್ಲಭಭಾಯ್‌ ಪಟೇಲ್‌ ಅವರ ಮಗಳ ಪಾತ್ರದಲ್ಲಿ ಜೀವ ತುಂಬಿದ್ದರು.ಬಹುಭಾಷಾ ನಟ ಕಮಲಹಾಸನ್‌ ಮಗಳು ಎಂಬ ತಾರಾ ವರ್ಚಸ್ಸಿಗಿಂತಲೂ ಹೆಚ್ಚಾಗಿ ತಮ್ಮ ಪ್ರತಿಭೆಯ ಮೇಲಿನ ನಂಬಿಕೆಯಿಂದಲೇ ಮುನ್ನಡಿಯಿಟ್ಟವರು.

ಸಂಗೀತವೆಂದರೆ ಬಾಲ್ಯದಿಂದಲೂ ಹುಚ್ಚು ಪ್ರೀತಿ. ನಟನೆಗಿಂತ ಹಾಡುವಾಸೆಯೇ ಹೆಚ್ಚು. ಹಾಗಾಗಿಯೇ ಒಂದು ಸಣ್ಣ ಬ್ರೇಕ್‌ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.