ADVERTISEMENT

ವಿಡಿಯೊ: ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳಿಗೆ ಹೊಡೆಯಲು ಮುಂದಾದ ಗಾಯಕಿ ಮಂಗ್ಲಿ 

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 8:36 IST
Last Updated 30 ಡಿಸೆಂಬರ್ 2021, 8:36 IST
ಗಾಯಕಿ ಮಂಗ್ಲಿ 
ಗಾಯಕಿ ಮಂಗ್ಲಿ    

ತೆಲುಗು ಗಾಯಕಿ ಮಂಗ್ಲಿಯ ಬಳಿ ಅಭಿಮಾನಿಗಳು ಸೆಲ್ಪಿತೆಗೆದುಕೊಳ್ಳಲು ಮುಗಿಬಿದ್ದ ಸಂದರ್ಭದಲ್ಲಿ ಅವರು ಅಭಿಮಾನಿಗಳ ವಿರುದ್ಧ ಕೋಪಗೊಂಡು ಹೊಡೆಯಲು ಮುಂದಾಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಂಗ್ಲಿ ಅವರು ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಆಂಧ್ರಸಚಿವರ ಪುತ್ರನ ವಿವಾಹಕ್ಕೆ ತೆರಳಿದ್ದರು. ಈ ವೇಳೆ ಸಾಕಷ್ಟು ಅಭಿಮಾನಿಗಳು ಸೆಲ್ಪಿಗೆಮುಂದಾಗಿದ್ದಾರೆ. ಇದರಿಂದ ಕೋಪಗೊಂಡು ಅವರು ಹೊಡೆಯಲು ಮುಂದಾದರು. ನಂತರ ಕೆಲ ಯುವಕರು ಅವರನ್ನು ಕಾರಿನಲ್ಲಿ ಕಳುಹಿಸಿಕೊಟ್ಟರು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದ ತೆಲುಗು ಆವೃತ್ತಿಯ 'ಕಣ್ಣೇ ಅಧಿರಿಂದಿ' ಹಾಡನ್ನು ಮಂಗ್ಲಿ ಹಾಡಿದ್ದರು. ಈ ಹಾಡು ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಇದೀಗತೆಲುಗು ಸೇರಿದಂತೆ ಕನ್ನಡ ಸಿನಿಮಾಗಳಲ್ಲೂ ಅವರು ಹಾಡುತ್ತಿದ್ದಾರೆ.

ADVERTISEMENT

ಸದ್ಯ ಅವರು ಪ್ರೇಮ್‌ ನಿರ್ದೇಶನದ ’ಏಕ್ ಲವ್‌ಯಾ’ ಸಿನಿಮಾದಲ್ಲೂ ಹಾಡಿದ್ದಾರೆ. ಮುಂದೆ ಹಲವು ಸಿನಿಮಾಗಳಲ್ಲೂ ಅವರು ಹಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.