ADVERTISEMENT

ಬರ್ತಿದ್ದಾನೆ ‘ಸನ್‌ ಆಫ್‌ ಮುತ್ತಣ್ಣ’

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 23:30 IST
Last Updated 11 ಜುಲೈ 2024, 23:30 IST
ಪ್ರಣಂ ದೇವರಾಜ್‌ 
ಪ್ರಣಂ ದೇವರಾಜ್‌    

ನಟ ದೇವರಾಜ್ ಕಿರಿಯ ಪುತ್ರ ಪ್ರಣಂ ದೇವರಾಜ್ ನಟನೆಯ ‘ಸನ್ ಆಫ್‌ ಮುತ್ತಣ್ಣ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ ಎಂದಿದೆ ಚಿತ್ರತಂಡ. 

‘ಸನ್‌ ಆಫ್‌ ಮುತ್ತಣ್ಣ’ ಸಿನಿಮಾದ ನಿರ್ದೇಶಕ ಶ್ರೀಕಾಂತ್ ಹುಣಸೂರು ಮತ್ತು ಚಿತ್ರತಂಡ  ಸುದ್ದಿಗೋಷ್ಠಿ ನಡೆಸಿದ ಮಾಹಿತಿ ಹಂಚಿಕೊಂಡಿತು. ‘ಈ ಸಿನಿಮಾದ ಪಯಣ ಖುಷಿಯ ಜೊತೆಗೆ ಭಾವನಾತ್ಮಕವಾಗಿಯೂ ಇತ್ತು. ಅಪ್ಪ ಮಗನ ಬಾಂಧವ್ಯದ ಕಥೆ ಇದು. ನಮ್ಮ ಕುಟುಂಬದಲ್ಲಿ ಅಪ್ಪ ಮಗನ ಬಾಂಧವ್ಯ ಹೇಗಿದೆ ಅಂತಾ ಎಲ್ಲರಿಗೂ ಗೊತ್ತಿದೆ. ರಂಗಾಯಣ ರಘು ಅವರು ನನಗೆ ತಂದೆ ರೀತಿ ಸೆಟ್‌ನಲ್ಲಿ ಇದ್ದರು. ಇವರಿಂದ ಸಾಕಷ್ಟು ಕಲಿತಿದ್ದೇನೆ. ಖುಷಿ ಅದ್ಭುತ ನಟಿ’ ಎಂದರು ಪ್ರಣಂ. 

‘ಬಂಡಿ ಮಹಾಕಾಳಿ ದೇಗುಲದಲ್ಲಿ ಸಿನಿಮಾ ಆರಂಭಿಸಿದ್ದೆವು. ಇಲ್ಲಿಯೇ ಚಿತ್ರೀಕರಣ ಪೂರ್ಣಗೊಳಿಸಿದ್ದೇವೆ. 49 ದಿನ ಶೂಟಿಂಗ್ ನಡೆಸಲಾಗಿದೆ. ವಾರಾಣಸಿ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ’ ಎಂದರು ಶ್ರೀಕಾಂತ್‌. 

ADVERTISEMENT

ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಖುಷಿ ರವಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ತಾರಾಬಳಗದಲ್ಲಿದ್ದಾರೆ. ಪುರಾತನ ಫಿಲಂಸ್‌ ಬ್ಯಾನರ್ ಅಡಿಯಲ್ಲಿ ದಿವ್ಯಾ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಚಿತ್ರಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. 

ಖುಷಿ ರವಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.