ADVERTISEMENT

‘ಮಾದೇವ’ದಲ್ಲಿ ಒಂದಾದ ‘ರಾಬರ್ಟ್‌’ ಜೋಡಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 9:39 IST
Last Updated 31 ಜುಲೈ 2022, 9:39 IST
ಸೋನಲ್‌ ಮೊಂತೆರೋ
ಸೋನಲ್‌ ಮೊಂತೆರೋ   

ಕಳೆದ ವರ್ಷ ತೆರೆಕಂಡಿದ್ದ ‘ರಾಬರ್ಟ್‌’ ಸಿನಿಮಾದಲ್ಲಿ ಮೋಡಿ ಮಾಡಿದ್ದ ರಾಘವ–ನರ್ಸಮ್ಮನ ಜೋಡಿ ಮತ್ತೆ ತೆರೆ ಮೇಲೆ ಮೋಡಿಮಾಡಲುಸಜ್ಜಾಗಿದೆ. ಇತ್ತೀಚೆಗಷ್ಟೇ ಸೆಟ್ಟೇರಿದ್ದ ನಟ ವಿನೋದ್‌ಪ್ರಭಾಕರ್‌ ಅವರ ಹೊಸ ಸಿನಿಮಾ ‘ಮಾದೇವ’ಕ್ಕೆ ನಾಯಕಿಯಾಗಿ ಸೋನಲ್‌ ಮೊಂತೆರೋ ಆಯ್ಕೆಯಾಗಿದ್ದಾರೆ.

‘ಪಂಚತಂತ್ರ’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ಕರಾವಳಿಯ ಬೆಡಗಿ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳಿಗೆ ಕಾಲ್‌ಶೀಟ್‌ ನೀಡುತ್ತಿದ್ದಾರೆ. ವಿನೋದ್ ಹಾಗೂ ಸೋನಲ್ ರಾಬರ್ಟ್ ಸಿನಿಮಾದಲ್ಲಿ ತನು-ರಾಘವ ಎಂಬ ಪಾತ್ರದ ಮೂಲಕ ಪ್ರೇಕ್ಷಕರ ಮನೆ ಗೆದ್ದಿದ್ದರು. ‘ಖಾಕಿ’ ಸಿನಿಮಾ ಸಾರಥಿ ನವೀನ್ ಬಿ. ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮಾದೇವ’ ಚಿತ್ರದಲ್ಲಿ ಸೋನಲ್ 80ರ ದಶಕದ ಮಧ್ಯಮವರ್ಗದ ಹುಡುಗಿಯಾಗಿ ಬಣ್ಣ ಹಚ್ಚಿದ್ದಾರೆ.

ಭಾವನಾತ್ಮಕ ಮತ್ತು ಮಾಸ್ ಎಲಿಮೆಂಟ್ ಕಥಾಹಂದರದ ಈ ಸಿನಿಮಾ ಜೈಲಿನ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯಲಿದೆ. ವಿನೋದ್ ಪ್ರಭಾಕರ್ ಈ ಹಿಂದೆ ನಿರ್ವಹಿಸಿದ್ದ ಪಾತ್ರಗಳಿಗಿಂತ ಭಿನ್ನವಾಗಿ ಕಾಣುತ್ತಾರೆ ಎಂದಿದೆ ಚಿತ್ರತಂಡ. ಶಿವಮೊಗ್ಗ, ಧಾರವಾಡ ಮತ್ತು ಹೈದರಾಬಾದ್‌ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಶ್ರುತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಬಾಲಕೃಷ್ಣ ತೋಟ ಛಾಯಾಗ್ರಹಣ, ಪ್ರದ್ಯೋಥನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.