ADVERTISEMENT

ಉಪೇಂದ್ರ ಅಣ್ಣನ ಮಗನ ಚಿತ್ರ ‘ಸ್ಪಾರ್ಕ್‌’ನಲ್ಲಿ ‘ನೆನಪಿರಲಿ’ ಪ್ರೇಮ್‌

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 23:26 IST
Last Updated 17 ಏಪ್ರಿಲ್ 2025, 23:26 IST
ಪ್ರೇಮ್‌ 
ಪ್ರೇಮ್‌    

ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಹೊಸ ಪ್ರಾಜೆಕ್ಟ್‌ ಸೆಟ್ಟೇರಿದ್ದು, ಚಿತ್ರೀಕರಣ ನಡೆಯುತ್ತಿದೆ. ಇದೀಗ ನಟ ನೆನಪಿರಲಿ ಪ್ರೇಮ್‌ ಸೆಟ್‌ ಪ್ರವೇಶಿಸಿದ್ದು, ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. 

ಡಿ. ಮಹಾಂತೇಶ್‌ ಹಂದ್ರಾಳ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಸಿನಿಮಾದಲ್ಲಿ ಪತ್ರಕರ್ತನಾಗಿ ನಿರಂಜನ್‌ ಬಣ್ಣ ಹಚ್ಚಿದ್ದಾರೆ. ‘ಜೇಮ್ಸ್’, ‘ಭರಾಟೆ’, ‘ಕನಕ’ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದ ಮಹಾಂತೇಶ್‌ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ‘ಲವ್ಲಿ ಸ್ಟಾರ್‌’ಗೆ ವಿಶೇಷ ಪಾತ್ರವೊಂದನ್ನು ಬರೆದಿರುವ ಮಹಾಂತೇಶ್‌, ಹಿಂದೆಂದೂ ಕಾಣದ ಲುಕ್‌ನಲ್ಲಿ ಪ್ರೇಮ್‌ ಅವರನ್ನು ತೆರೆ ಮೇಲೆ ತರಲಿದ್ದಾರೆ. ಚಿತ್ರದ ನಾಯಕಿಯಾಗಿ ರಚನಾ ಇಂದರ್‌ ಬಣ್ಣಹಚ್ಚಿದ್ದಾರೆ. 

ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಸ್ಪಾರ್ಕ್‌’ ಚಿತ್ರವನ್ನು ಡಾ.ಗರಿಮಾ ಅವಿನಾಶ್ ವಸಿಷ್ಠ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಛಾಯಾಚಿತ್ರಗ್ರಹಣ, ಸಚಿನ್ ಬಸ್ರೂರ್ ಸಂಗೀತ‌ ನಿರ್ದೇಶನ, ಮಧು ಸಂಕಲನ ಚಿತ್ರಕ್ಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.