ADVERTISEMENT

‘ದಿ ಪೈಂಟರ್’ಗೆ ಶ್ರೀಮುರಳಿಯ ಟಚ್‌ ಅಪ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 7:36 IST
Last Updated 6 ಆಗಸ್ಟ್ 2020, 7:36 IST

ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಿಸಿರುವ ‘ದಿ ಫೈಂಟರ್‌’ ಚಿತ್ರವನ್ನು ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಇದೇ 14ರಂದು ಬಿಡುಗಡೆ ಮಾಡಲಿದ್ದು, ಚಿತ್ರತಂಡಕ್ಕೆ ಸ್ಟಾರ್ ನಟ ಸಾಥ್‌ ನೀಡಿದ್ದಾರೆ.

ಲಾಕ್ ಡೌನ್ ವೇಳೆ ವಿಭಿನ್ನ ತಾಣಗಳಲ್ಲಿ ಚಿತ್ರೀಕರಿಸಿರುವ ‘ದಿ ಪೈಂಟರ್’ ಚಿತ್ರ ಇದೇ 14ರಂದು ಶ್ರೇಯಸ್ ಎಂಟರ್ಟೈನ್ಮೆಂಟ್ ATT (ಆಲ್‌ ಟೈಮ್ ಥಿಯೇಟರ್) ಮೂಲಕ ಬಿಡುಗಡೆಯಾಗಲಿದೆ.ಹೊಸಬರ ಚಿತ್ರ ಹಾಗೂ ವಿಷಯ ಪ್ರಧಾನ ಚಿತ್ರಗಳನ್ನು ಸದಾ ಬೆಂಬಲಿಸುವ ನಟ ಶ್ರೀಮುರಳಿ, ಈ ಬಾರಿವೆಂಕಟ ಭಾರದ್ವಾಜ್ ನಿರ್ದೇಶಿಸಿ, ನಟಿಸಿರುವ ‘ದಿ ಪೈಂಟರ್’ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಚಿತ್ರದ ಟ್ರೈಲರ್ ಶುಕ್ರವಾರ ಸಂಜೆ 5 ಗಂಟೆಗೆ ಲಹರಿ ಯೂಟ್ಯೂಬ್ ಚಾನೆಲ್‌ ಮೂಲಕ ಬಿಡುಗಡೆ ಯಾಗುತ್ತಿದೆ.

‘ದಿ ಪೈಂಟರ್’ ಚಿತ್ರ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಕಥೆಯ ಚಿತ್ರ.ಕೊರೊನಾ ಪರಿಸ್ಥಿತಿಯನ್ನು ಕೆಲವರು ಹೇಗೆ ಒಳ್ಳೆಯದಕ್ಕೆ ಮತ್ತೆ ಕೆಲವರು ಹೇಗೆಲ್ಲಾ ಕೆಟ್ಟದಕ್ಕೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರದ ಕಥೆ ಹೇಳಲಿದೆ.

ADVERTISEMENT

shreyasET App ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್‌ ಮಾಡಿಕೊಂಡು ₹50 ಪಾವತಿಸಿ ಈ ಚಿತ್ರ ವೀಕ್ಷಿಸಬಹುದು. ಚಿತ್ರದ ಗಳಿಕೆಯಲ್ಲಿ ಶೇ 20ರಷ್ಟು ಹಣವನ್ನು ಕನ್ನಡ ಚಿತ್ರ ಕಾರ್ಮಿಕರ ನೆರವಿಗೆ ದೇಣಿಗೆ ನೀಡಿವುದಾಗಿ ಚಿತ್ರತಂಡ ಈ ಹಿಂದೆಯೇ ಪ್ರಕಟಿಸಿದೆ.

ಕೆ.ಕೆ. ಕಂಬೈನ್ಸ್ ಹಾಗೂ ಅಮೃತ ಫಿಲಂ ಸೆಂಟರ್ ಮೂಲಕ ಚಿತ್ರ ನಿರ್ಮಿಸಲಾಗಿದೆ. ತಾರಾಗಣದಲ್ಲಿ ವೆಂಕಟ್ ಭಾರದ್ವಾಜ್, ರಾಜ್ ಕಮಲ್, ಭಾಷಾ, ಶಿನವ್ ಕಬೀರ್ ಸೋಮಯಾಜಿ, ಶಮೀಕ್, ಉಮಾ, ಮಧುರ, ಅಜಯ್ ಲಾರೆನ್ಸ್ ಶಮಾ, ವೈಷ್ಣವಿ, ವೆಂಕಟ್ ಶಾಸ್ತ್ರಿ, ಮನೋಜ್, ಕಿರಣ್, ಮಿಥುನ್ ಮತ್ತು ಸಂಜಯ್ ಇದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯು ವೆಂಕಟ್ ಭಾರದ್ವಾಜ್ ಅವರದೇ. ಛಾಯಾಗ್ರಹಣ ಶಮೀಕ್, ಸಂಜಯ್, ಮಣಿ, ವೆಂಕಟೇಶ್ ಶಾಸ್ತ್ರಿ, ಕಬೀರ್ ಸೋಮಯಾಜಿ, ಸಂಕಲನ ಚಂದನ್ ಪಿ., ಸಂಗೀತ ಲವ್ ಪ್ರಾಣ್ ಮೆಹ್ತಾ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.