ADVERTISEMENT

ರಂಗೋಲಿ ಚಂಡೇಲ್‌– ಸಿನಿಮಾ ಅಲ್ಲ ನೈಜ ಕಥೆ

ವಿಶ್ವ ಯೋಗ ದಿನ: ನಟಿ ಕಂಗನಾ ರಣೌತ್‌ ಸಹೋದರಿಯ ಕರುಣಾಜನಕ ಕಥನ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 10:52 IST
Last Updated 21 ಜೂನ್ 2021, 10:52 IST
ಕಂಗನಾ ರಣೌತ್‌
ಕಂಗನಾ ರಣೌತ್‌   

ರಂಗೋಲಿ ಚಂಡೇಲ್‌ ಗೊತ್ತಾ? ಅಷ್ಟೊಂದು ಪರಿಚಿತ ಅಲ್ಲದ ಹೆಸರಿದು. ಆದರೆ ಸಹೋದರಿಯ ಹೆಸರು ಖ್ಯಾತವಾದದ್ದು. ಅವರ ತಂಗಿಯೇ ಖ್ಯಾತ ನಟಿ ಕಂಗನಾ ರನೌತ್‌. ರಂಗೋಲಿ ಅವರ ಬದುಕಿನಲ್ಲಾದ ದುರ್ಘಟನೆಗೆ ಯೋಗದ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ ಬಗೆಯನ್ನು ಕಂಗನಾ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಶ್ವ ಯೋಗ ದಿನದ ಪ್ರಯುಕ್ತ ಇದು ಪ್ರಸ್ತುತವೂ ಹೌದು.

ರಂಗೋಲಿ ಅವರು 21ನೇ ವಯಸ್ಸಿನಲ್ಲಿದ್ದಾಗ ಬೀದಿ ಕಾಮಣ್ಣನೊಬ್ಬ ಅವರ ಮುಖದ ಮೇಲೆ ಆ್ಯಸಿಡ್‌ ಎರಚಿದ್ದ. ಅವರ ಮುಖ ಸುಟ್ಟು, ಒಂದು ಕಣ್ಣನ್ನೂ ಕಳೆದುಕೊಂಡರು. ಸ್ತನಕ್ಕೂ ಹಾನಿ ಆಗಿತ್ತು. ಮೂರು ವರ್ಷಗಳ ಅವಧಿಯಲ್ಲಿ 53 ಶಸ್ತ್ರಚಿಕಿತ್ಸೆಗಳನ್ನು ನಡೆಸಬೇಕಾಯಿತು. ಅವರ ಮಾನಸಿಕ ಆರೋಗ್ಯ ಹದಗೆಟ್ಟಿತ್ತು. ವಾಯುಸೇನೆ ಅಧಿಕಾರಿ ಜೊತೆ ನಿಶ್ಚಿತಾರ್ಥ ಆಗಿದ್ದ ಮದುವೆಯೂ ಮುರಿದು ಹೋಯಿತು. ರಂಗೋಲಿ ಖಿನ್ನತೆಗೆ ಜಾರಿದ್ದರು. ಮಾತು ಮರೆತೇಬಿಟ್ಟಿದ್ದರು.

ಆಘಾತಕ್ಕೊಳಗಾದ ಅವರಿಗೆ ನೀಡಿದ ಯಾವ ಚಿಕಿತ್ಸೆಯೂ ಫಲಿಸಲಿಲ್ಲ. ‘ಅಕ್ಕ ಮೊದಲಿನಂತೆ ಮಾತನಾಡಬೇಕು ಎಂದು ಹಠ ತೊಟ್ಟೆ. ನಾನು ಹೋದಲ್ಲೆಲ್ಲಾ ಅವಳನ್ನೂ ಕರೆದೊಯ್ದೆ. ಕೊನೆಗೆ ಯೋಗ ತರಗತಿ ಸೇರಿದೆವು. ಯೋಗ ಅವಳಲ್ಲಿ ಗಮನಾರ್ಹ ಸುಧಾರಣೆ ತಂದಿತು. ನನ್ನ ಮಾತು, ಚಟಾಕಿಗಳಿಗೆ ಅವಳು ನಿಧಾನಕ್ಕೆ ಪ್ರತಿಕ್ರಿಯಿಸಲು ಆರಂಭಿಸಿದಳು. ಕ್ರಮೇಣ ಕಣ್ಣಿನ ದೃಷ್ಟಿಯೂ ಮರಳಿತು’ ಎಂದು ಕಂಗನಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.