ADVERTISEMENT

‘ಸು ಫ್ರಮ್‌ ಸೋ’ನ ಡ್ಯಾಂಕ್ಸ್‌ ಆ್ಯಂಥಮ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 23:58 IST
Last Updated 30 ಜೂನ್ 2025, 23:58 IST
ಹಾಡಿನ ದೃಶ್ಯ 
ಹಾಡಿನ ದೃಶ್ಯ    

ನಟ ರಾಜ್‌ ಬಿ.ಶೆಟ್ಟಿ ಅವರ ಲೈಟರ್‌ ಬುದ್ಧ ಫಿಲಂಸ್‌ ನಿರ್ಮಾಣ ಸಂಸ್ಥೆಯಡಿ ನಿರ್ಮಾಣಗೊಂಡ ‘ಸು ಫ್ರಮ್‌ ಸೋ’ ಸಿನಿಮಾ ಜುಲೈ 25ಕ್ಕೆ ರಿಲೀಸ್‌ ಆಗಲಿದೆ. ಚಿತ್ರದ ‘ಡ್ಯಾಂಕ್ಸ್‌ ಆ್ಯಂಥಮ್‌’ ಬಿಡುಗಡೆಯಾಗಿದ್ದು ಜನರ ಮೆಚ್ಚುಗೆ ಪಡೆಯುತ್ತಿದೆ. 

ಈ ಹಾಡಿಗೆ ರಾಜ್ ಬಿ.ಶೆಟ್ಟಿ ಅವರೇ ಸಾಹಿತ್ಯ ಬರೆದಿದ್ದು, ಅನುರಾಗ್ ಕುಲಕರ್ಣಿ ಹಾಡಿದ್ದಾರೆ. ಸುಮೇಧ್ ಕೆ. ಸಂಗೀತ ನಿರ್ದೇಶನ ಹಾಡಿಗಿದೆ. ವಿನಾಯಕ ಆಚಾರ್ಯ ನೃತ್ಯ ಸಂಯೋಜನೆ ಮಾಡಿದ್ದಾರೆ. ಹಾಡಿನಲ್ಲಿ ಜೆ.ಪಿ.ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ.ತುಮಿನಾಡು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಹಾಗೂ ಇತರರು ಹೆಜ್ಜೆ ಹಾಕಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾವನ್ನು ಜೆ.ಪಿ.ತುಮಿನಾಡು ನಟಿಸಿ ನಿರ್ದೇಶಿಸಿದ್ದಾರೆ. ಇದು ಅವರ ನಿರ್ದೇಶನದ ಚೊಚ್ಚಲ ಸಿನಿಮಾ. ಎಸ್.ಚಂದ್ರಸೇಖರನ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಸಿನಿಮಾವನ್ನು ಶಶಿಧರ್ ಶೆಟ್ಟಿ ಬರೋಡ, ರವಿ ರೈ ಕಳಸ, ರಾಜ್ ಬಿ ಶೆಟ್ಟಿ ಮೂವರು ಸೇರಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಸಂದೀಪ್ ತುಳಸೀದಾಸ್ ಹಿನ್ನೆಲೆ ಸಂಗೀತ ಇರುವ ಈ ಚಿತ್ರಕ್ಕೆ ಅರ್ಜುನ್ ರಾಜ್ ಸಾಹಸ ಸಂಯೋಜನೆ ಮಾಡಿದ್ದಾರೆ. ಮಂಗಳೂರು ಸುತ್ತಮುತ್ತಲಿನ ವೇಣೂರು, ಕಕ್ಯಪದವು ಹಾಗೂ ಇತರ ಕಡೆ ಸುಮಾರು 50 ದಿನಗಳ ಕಾಲ ಸಿನಿಮಾದ ಚಿತ್ರೀಕರಣ ನಡೆದಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.