
ಪ್ರಜಾವಾಣಿ ವಾರ್ತೆ
ಬಹುತೇಕ ಹೊಸಬರಿಂದಲೇ ಕೂಡಿರುವ ‘ಸುಖೀಭವ’ ಚಿತ್ರದ ಟ್ರೇಲರ್ ಇತ್ತಿಚೆಗಷ್ಟೇ ಬಿಡುಗಡೆಗೊಂಡಿದೆ. ಎನ್.ಕೆ.ರಾಜೇಶ್ ನಾಯ್ಡು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಯೋಗರಾಜ್ ಭಟ್ ಸೇರಿದಂತೆ ಅನೇಕರ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಇದು ನನ್ನ ಚೊಚ್ಚಲ ನಿರ್ದೇಶನದ ಸಿನಿಮಾ. ಕೌಟುಂಬಿಕ ಕಥಾ ಹಂದರವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ‘ಬೇಡ ಮಚ್ಚಾ ಬೇಡ’ ಎಂಬ ಗೀತೆಗೆ ನಟ ಶರಣ್ ಧ್ವನಿಯಾಗಿದ್ದಾರೆ’ ಎಂದರು ನಿರ್ದೇಶಕ.
ಸಂತೋಷ್ ಕುಮಾರ್, ಭಾರ್ಗವಿ ಸಂತೋಷ್ ನಿರ್ಮಾಪಕರು. ಮಹೇಂದ್ರ ಚಿತ್ರದ ನಾಯಕ. ಸುಶ್ಮಿತ ನಾಯಕ್ ಹಾಗೂ ವಿಯಾನ್ಶಿ ಹೆಗ್ಡೆ ನಾಯಕಿಯರು. ಗೌರವ್ ಶೆಟ್ಟಿ, ಶೋಭರಾಜ್, ರವಿಶಂಕರ್ ಗೌಡ, ಸುನಿಲ್ ಪುರಾಣಿಕ್, ತುಕಾಲಿ ಸಂತು, ಮೈತ್ರಿ ಜಗ್ಗಿ ಮುಂತಾದವರು ಅಭಿನಯಿಸಿದ್ದಾರೆ. ಬಿ.ಜೆ.ಭರತ್-ಶುಭಂ ಸಂಗೀತ, ಮಂಜುನಾಥ್ ನಾಯಕ್ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.