ADVERTISEMENT

ಸುಕೃತಾನಾಗ್ ನಟನೆಯ ‘ಪಾರ್ಟ್‌ನರ್‌’ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 22:30 IST
Last Updated 28 ಮಾರ್ಚ್ 2024, 22:30 IST
ಸುಕೃತಾನಾಗ್
ಸುಕೃತಾನಾಗ್   

ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ‘ಪಾರ್ಟ್‌ನರ್‌’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಟಿ.ಆರ್.ಗೌತಮ್‌ಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ನಾಗರಾಜ.ಆರ್. ಹಾಗೂ ಟಿ.ಕೆ.ರವಿ ಬಂಡವಾಳ ಹೂಡಿದ್ದಾರೆ.

‘ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಸಹಾಯಕ, ಸಹ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವವಿದೆ. ಮೊದಲಬಾರಿಗೆ ನಿರ್ದೇಶನ ಮಾಡಿದ್ದೇನೆ. ಇಬ್ಬರು ಸ್ನೇಹಿತರ, ಸ್ನೇಹದ ಸುತ್ತ ನಡೆಯುವ ಕಥೆ ಇದಾಗಿದ್ದು, ಕಮರ್ಷಿಯಲ್‌ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು ಚಿತ್ರದಲ್ಲಿವೆ’ ಎಂದರು ನಿರ್ದೇಶಕರು.

ಚೇತಸ್ ಆರ್ ಮತ್ತು ಸತೀಶ್ ಕೃಷ್ಣಶೆಟ್ಟಿ ಚಿತ್ರದ ನಾಯಕರಾಗಿ ನಟಿಸಿದ್ದು, ಅಗ್ನಿಸಾಕ್ಷಿ ಖ್ಯಾತಿಯ ಸುಕೃತಾನಾಗ್ ಹಾಗೂ ಪ್ರೀತಿ ಮಿರಾಜ್ಕರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಬಲ ರಾಜವಾಡಿ, ಶಿವರಾಜ್ ಕೆ.ಆರ್.ಪೇಟೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.